ತೆಲುಗಿನಲ್ಲಿ ಬ್ಯುಸಿ ಆದ ಶ್ರೀದೇವಿ ಪುತ್ರಿ..ಎನ್​ಟಿಆರ್​, ರಾಮ್​ಚರಣ್​ ಚಿತ್ರಗಳಲ್ಲಿ ಜಾಹ್ನವಿಗೆ ಚಾನ್ಸ್​​!

jahnavi
Published on

ಹೈದರಾಬಾದ್​: ಭಾರತೀಯ ಚಿತ್ರಜಗತ್ತಿನಲ್ಲಿ ಮಿಂಚಿ ಮರೆಯಾದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತನ್ನ ತಾಯಿಯಂತೆ ದಕ್ಷಿಣ ಭಾರತದಲ್ಲೂ ನೆಲೆಯೂರಲು ಯತ್ನಿಸಿದಂತಿದೆ. ಈಗ ತೆಲುಗಿನಲ್ಲಿ ತನ್ನ ಶಕ್ತಿ ತೋರಿಸಲು ಬರುತ್ತಿದ್ದಾಳೆ. ಎನ್ ಟಿಆರ್ ಅಭಿನಯದ 'ದೇವರ' ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಕೊರಟಾಲ ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಶೂಟಿಂಗ್‌ನಲ್ಲಿ ಜಾಹ್ನವಿ ಈಗಾಗಲೇ ಭಾಗವಹಿಸಿದ್ದಾರೆ. ಈ ಚಿತ್ರವು ಪಾರ್ಟ್​ 1 ಮತ್ತು 2 ತಯಾರಾಗುತ್ತಿದೆ. ಈ ಚಿತ್ರದ ಮೊದಲ ಭಾಗ ಇದೇ ವರ್ಷ ಬಿಡುಗಡೆಯಾಗಲಿದೆ. ‘ದೇವರ’ಪಾರ್ಟ್​ 1 ಬಿಡುಗಡೆಯಾಗುವ ಮುನ್ನವೇ ಜಾಹ್ನವಿ ಕಪೂರ್ ತೆಲುಗಿನಲ್ಲಿ ಮತ್ತೊಂದು ದೊಡ್ಡ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ರಾಮ್ ಚರಣ್ ನಾಯಕನಾಗಿ ‘ಉಪ್ಪನ’ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಸಿನಿಮಾ ತಯಾರಾಗಲಿದೆ ಎಂಬುದು ಗೊತ್ತೇ ಇದೆ. ವೆಂಕಟ ಸತೀಶ್ ಕಿಲಾರು ಈ ಚಿತ್ರವನ್ನು ಸುಕುಮಾರ್ ರೈಟಿಂಗ್ಸ್ ಮತ್ತು ಮೈತ್ರಿ ಮೂವೀ ಮೇಕರ್ಸ್ ಜೊತೆಗೆ ನಿರ್ಮಿಸಲಿದ್ದಾರೆ. ಅವರು ಈ ಬೇಸಿಗೆಯಲ್ಲಿ ಶೂಟಿಂಗ್ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಈ ಚಿತ್ರದ ನಾಯಕಿ ಪಾತ್ರಕ್ಕೆ ಜಾಹ್ನವಿ ಕಪೂರ್ ಅವರನ್ನು ಅಂತಿಮಗೊಳಿಸಲಾಗಿದೆ ಎಂಬುದು ಇತ್ತೀಚಿನ ಮಾಹಿತಿ.

ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂಬುದು ಫಿಲಂನಗರದ ಮಾತು. ಅಲ್ಲದೇ ಅಖಿಲ್ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಜಾಹ್ನವಿ ಹೆಸರು ಕೇಳಿ ಬರುತ್ತಿದೆ. ಹೀಗೆ ಸಾಲು ಸಾಲು ಚಿತ್ರಗಳಿಂದ ಜಾಹ್ನವಿ ತೆಲುಗಿನಲ್ಲಿ ಬ್ಯುಸಿಯಾಗುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net