

ಮುಂಬೈ: ಬಾಲಿವುಡ್‌ನ ಅಂದದ ಬೆಡಗಿ ಅನನ್ಯಾಪಾಂಡೆ ಇತ್ತೀಚೆಗೆ 'ಪ್ಯಾರಿಸ್ ಹಾಟ್ ಕೌಚರ್ ವೀಕ್ 2024' ನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದು, ಅವರು ಧರಿಸಿದ್ದ ಬಟರ್‌ಫ್ಲೈ ಟಾಪ್ ಮತ್ತಿತರ ಉಡುಪುಗಳು ಗಮನ ಸೆಳೆದವು.
ಈ ಫೋಟೋಗಳು ಮತ್ತು ವಿಡಿಯೋಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಶೇಷವಾಗಿ ಇವರು ಧರಿಸಿರುವ ಬಟರ್‌ಫ್ಲೈ ಟಾಪ್ ಉಡುಪು ಇರುವ ಫೋಟೋ ವೈರಲ್ ಆಗಿದೆ.
ಚಿಟ್ಟೆಯೊಂದು ಎದೆಯ ಮೇಲೆ ಹಾರಿ ಬಂದು ಕುಳಿತಂತೆ ಇರುವ ಟಾಪ್ ಇದಾಗಿದೆ. ಈ ವಿನೂತನ ವಿನ್ಯಾಸದ ಚಿಟ್ಟೆ ಟಾಪ್‌ಗೆ ಎಲ್ಲರೂ ಮನಸೋತಿದ್ದಾರೆ. ಅನನ್ಯ ಪಾಂಡೆ ಎಂಬ ಮುದ್ದಾದ ನಟಿ ಇನ್ನಷ್ಟು ಅಂದವಾಗಿ ಕಾಣಿಸಲು ಈ ಚಿಟ್ಟೆ ಟಾಪ್ ನೆರವಾಗಿದೆ.
ಲೈಗರ್ ಸಿನಿಮಾದ ಸುಂದರಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿರುವ ಬಾಲಿವುಡ್ ಸಿನಿಮಾವೊಂದು ಇತ್ತೀಚೆಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಬಾಲಿವುಡ್ ಚಿತ್ರ ಖೋ ಗಯೇ ಹಮ್ ಕಹಾನ್ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.
ಲಿಗರ್ ಚಿತ್ರದ ಮೂಲಕ ಅನನ್ಯ ಪಾಂಡೆ ಟಾಲಿವುಡ್‌ಗೆ ಎಂಟ್ರಿ ನೀಡಿದ್ದರು. ಆದರೆ, ಆ ಚಿತ್ರ ಅಂದುಕೊಂಡಷ್ಟು ಯಶಸ್ಸು ಪಡೆದಿರಲಿಲ್ಲ. ಕಳೆದ ವರ್ಷ ಬಿಡುಗಡೆಯಾದ ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಅನನ್ಯ ಪಾಂಡೆ ಐಟಂ ಸಾಂಗ್‌ನಲ್ಲಿ ಮಿಂಚಿದ್ದರು. ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದ, ಆಗಸ್ಟ್ 2023 ರಲ್ಲಿ ಬಿಡುಗಡೆಯಾದ ಡ್ರೀಮ್ ಗರ್ಲ್ 2 ಚಿತ್ರ 150 ಕೋಟಿ ಕಲೆಕ್ಷನ್ ಮಾಡಿದೆ.
ಅನನ್ಯ ಪಾಂಡೆ ನಟನೆಯ ಕೆಲವೊಂದು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಪಡೆಯಲಿಲ್ಲ. ನಟನೆ ಮಾತ್ರವಲ್ಲದೆ ಮಾಡೆಲಿಂಗ್, ಫ್ಯಾಷನ್ ಅಂದರೆ ಅನನ್ಯಗೆ ಅಚ್ಚುಮೆಚ್ಚು. ಇವರ ಇನ್‌ಸ್ಟಾಗ್ರಾಂ ಡೈರಿಗಳಲ್ಲಿ ಪ್ರತಿನಿತ್ಯ ಹೊಸತನದ ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ದೊರಕುತ್ತವೆ.