

ಕಾಸರಗೋಡು: ಸೇವಾ ಪಾಕ್ಷಿಕ ಅಂಗವಾಗಿ ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಚಿತ್ರಕಲಾ ಸ್ಪರ್ಧೆ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರುಗಿತು.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಸ್ಪರ್ಧೆ ಉದ್ಘಾಟಿಸಿದರು.
ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ರಮಣಿ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯೆ ಸವಿತಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಮಂಡಲ ಕಾರ್ಯದರ್ಶಿ ಪ್ರಿಯಾ ನಾಯಕ್, ಬಿಜೆಪಿ ಮಧೂರ್ ಪಶ್ಚಿಮ ಪ್ರದೇಶ ಅಧ್ಯಕ್ಷ ಮಾಧವ, ಮಧೂರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ., ನುಳ್ಳಿಪಾಡಿ ವಾರ್ಡ್‌ನ ಜನಪ್ರತಿನಿಧಿ ಯಶೋದಾ ಬಿ., ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಲೀಲಾವತಿ, ಅನಿತಾ ನಾಯಕ್, ಎಸ್.ಅನುಶ್ರೀ, ಧನ್ಯಾ ಸುಮೋದ್, ಮಮತಾ ಸಾಗರ್, ಪ್ರೇಮಲತಾ ಮೊದಲಾದರಿದ್ದರು.