ಜ್ಞಾನಸುಧಾದಲ್ಲಿ ಯಕ್ಷಗಾನ ತಾಳಮದ್ದಳೆ

yakshagana
ಜ್ಞಾನಸುಧಾ ಸಂಸ್ಥೆಯ ಆವರಣದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು
Published on

ಕಾರ್ಕಳ: ಜ್ಞಾನಸುಧಾ ಸಂಸ್ಥೆ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಯಕ್ಷೋತ್ಕರ್ಷ ಬಳಗದಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಳೆ ನಡೆಯಿತು.

ಬೈಲೂರಿನ ಸಪಪೂ ಕಾಲೇಜಿನ ಉಪನ್ಯಾಸಕ ಗೋಪಾಲಕೃಷ್ಣ ಗೋರೆ ನಿರ್ದೇಶನದಲ್ಲಿ ನಡೆದ ತಾಳಮದ್ದಳೆಯಲ್ಲಿ ಭಾಗವತರಾಗಿ ಉಪನ್ಯಾಸಕ ಸೀತಾರಾಮ್ ಭಟ್ ಬೈಲೂರು, ಮದ್ದಳೆಯಲ್ಲಿ ಆನಂದ್ ಗುಡಿಗಾರ್ ಕೆರ್ವಾಶೆ, ಚೆಂಡೆಯಲ್ಲಿ ಶ್ರೀನಿಧಿ ಆಚಾರ್, ಚಕ್ರತಾಳದಲ್ಲಿ ರಂಜಿತ್ ಪಾಟ್ಕರ್ ಸಹಕರಿಸಿದರು.

ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಮುನಿಯಾಲು ಸ.ಪ.ಪೂ ಕಾಲೇಜು ಉಪನ್ಯಾಸಕ ಅನಿಲ್ ಕುಮಾರ್, ಜ್ಯೋತಿ ಪದ್ಮನಾಭ ಭಂಡಿ, ಸಂಗೀತಾ ಕುಲಾಲ್, ಆಜ್ಞಾ ಸೋಹಂ, ಶೇಖರ್ ಶೆಟ್ಟಿ, ಶ್ರೇಯಾನ್ ಜೈನ್ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net