

ಬ್ರಹ್ಮಾವರ: ರಂಗನಕೇರಿ ಬಾರಕೂರು ಸಾರ್ವಜನಿಕರ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಭಾನುವಾರ ಗಣೇಶೋತ್ಸವ ಧಾರ್ಮಿಕ ಸಭೆ ನಡೆಯಿತು. ಸಮಿತಿ ಅಧ್ಯಕ್ಷ ಉಮೇಶ್ ಆಚಾರ್ಯ ಬಾರಕೂರು ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ರಾಜಾರಾಮ್ ಶೆಟ್ಟಿ ಉದ್ಘಾಟಿಸಿದರು. ವಿವಿಧ ಕ್ಷೇತ್ರದ ಸಾಧನೆ ಮಾಡಿದ ಸತೀಶ್ ಪೂಜಾರಿ ಬೆಣ್ಣೆಕುದ್ರು, ಸಂದೀಪ್ ಪೂಜಾರಿ ನಡೂರು, ಗೀತಾ ಆನಂದ ಶೆಟ್ಟಿ, ಪೊಲೀಸ್ ಗಿರೀಶ್ ಕುಮಾರ್, ಪಲ್ಲವಿ ರಾಜ್ ಅವರನ್ನು ಸನ್ಮಾನಿಸಲಾಯಿತು.
ಬಾರಕೂರು ಶಾಂತಾರಾಮ ಶೆಟ್ಟಿ, ರಮೇಶ್ ಭಟ್ ನಾಯರ್ಬೆಟ್ಟು, ಸಿ.ಎ.ಗಣೇಶ್ ಕಾಂಚನ್ ಬಾರಕೂರು, ಪುರುಷೋತ್ತಮ ಶೆಟ್ಟಿಗಾರ್, ನಾರಾಯಣ ಮೂರ್ತಿ ಬೆಂಗಳೂರು ಉಪಸ್ಥಿತರಿದ್ದರು. ಗಾಯಕ ರಾಜೇಶ್ ಶ್ಯಾನುಭಾಗ್ ಪ್ರಾರ್ಥಿಸಿದರು. ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ್ ಶೆಟ್ಟಿಗಾರ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಬಿ. ಸುಧಾಕರ ರಾವ್ ಪ್ರಾಸ್ತಾವಿಕ ಮಾತನಾಡಿದರು. ದಾಮೋದರ ಶರ್ಮ ನಿರೂಪಿಸಿದರು. ಸತೀಶ್ ಅಮೀನ್ ವಂದಿಸಿದರು.