ಯಕ್ಷಗಾನ ಅಧ್ಯಯನ ಕೇಂದ್ರ ವಾರ್ಷಿಕೋತ್ಸವ

ksd
Published on

ಕಾಸರಗೋಡು: ನಗರದ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಸಪ್ತಮ ವಾರ್ಷಿಕೋತ್ಸವ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು.

ಕ್ಷೇತ್ರ ತಂತ್ರಿ ಉಳಿಯತ್ತಾಯ ವಿಷ್ಣು ಅಸ್ರ ಉದ್ಘಾಟಿಸಿದರು. ವೈದ್ಯ ಡಾ.ಜನಾರ್ದನ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳು ಪ್ರಾರ್ಥಿಸಿದರು. ಅಧ್ಯಯನ ಕೇಂದ್ರದ ನಾಟ್ಯಗುರು ರಾಕೇಶ್ ರೈ ಅಡ್ಕ, ಕೃಷ್ಣ ಮನ್ನಿಪ್ಪಾಡಿ, ಲವ ಮೀಪುಗುರಿ, ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ಅಧ್ಯಯನ ಕೇಂದ್ರದ ಅಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಕುಮಾರ್ ವಂದಿಸಿದರು. ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ‘ಹರೇ ರಾಮ ಹರೇ ಕೃಷ್ಣ’ ಯಕ್ಷಗಾನ ಬಯಲಾಟ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net