

ಉಳ್ಳಾಲ: ಯಕ್ಷಗಾನದ ಬೆಳವಣಿಗೆಗೆ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು. ಅಸೈಗೋಳಿಯ ಯಕ್ಷಮಿತ್ರರಿಂದ ಐದು ವರ್ಷಗಳಿಂದ ನಿರಂತರ ಯಕ್ಷಗಾನ ಸೇವೆ ನಡೆಯುತ್ತಿದೆ. ದೇವರು ಹಾಗೂ ಕಲಾಮಾತೆಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಯಕ್ಷಮಿತ್ರರು ಅಸೈಗೋಳಿ ವತಿಯಿಂದ ಅಸೈಗೋಳಿಯಲ್ಲಿ ಸೋಮವಾರ ಪಾವಂಜೆ ಮೇಳದ ಐದನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಾವಿದರಾದ ಸುಬ್ರಾಯ ಹೊಳ್ಳ ಮಾತನಾಡಿ, ನಾವೆಲ್ಲರೂ ಹಿರಿಯ ಕಲಾವಿದರನ್ನು ನೋಡಿ ಬೆಳೆದು ಬಂದವರು. ಯಕ್ಷಗಾನ ರಂಗದಲ್ಲಿ ಪರಿಪೂರ್ಣ ಕಲಾವಿದರಾಗಿ ರೂಪುಗೊಳ್ಳಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ ಎಂದರು.
ಭಾಗವತ ಪಟ್ಲ ಸತೀಶ್ ಶೆಟ್ಟಿ, ಕಲಾವಿದರಾದ ದಿವಾನ ಶಿವಶಂಕರ ಭಟ್, ಸುಬ್ರಾಯ ಹೊಳ್ಳ ಕಾಸರಗೋಡು, ಮಾಧವ ಬಂಗೇರ ಕೊಳತ್ತಮಜಲು, ರಘು ಶೆಟ್ಟಿ ನಾಳ ಹಾಗೂ ಅಸೈಗೋಳಿಯ ಉದಯ ಭಟ್ ಅವರನ್ನು ಸನ್ಮಾನಿಸಲಾಯಿತು.
ಯಕ್ಷಮಿತ್ರರು ಅಧ್ಯಕ್ಷ ರವಿಶಂಕರ್ ಭಟ್ ಅಸೈಗೋಳಿ, ಸದಸ್ಯರಾದ ಪರಮೇಶ್ವರ ಭಟ್, ಶಬರೀಶ್ ಭಟ್, ಅರುಣ್ ಭಟ್ ಉಪಸ್ಥಿತರಿದ್ದರು.
ಸಂಘಟಕ ವಿನಯಕೃಷ್ಣ ಕುರ್ನಾಡು ನಿರೂಪಿಸಿದರು.