ನಾಳೆ ಕಸಾಪದಿಂದ ಬದಿಯಡ್ಕದಲ್ಲಿ ದತ್ತಿ ಉಪನ್ಯಾಸ

Published on

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಆಶ್ರಯದಲ್ಲಿ ಎಂ.ಕೆ.ಜಿನಚಂದ್ರನ್, ಕಮಲಮ್ಮ ದತ್ತಿ ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದ ಕಾರ್ಯಕ್ರಮ ಮಾ.1ರಂದು ಮಧ್ಯಾಹ್ನ 2.30ಕ್ಕೆ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ನಡೆಯಲಿದೆ. ಕ.ಸಾ.ಪ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಆಯಿಶಾ ಪೆರ್ಲ, ಲೇಖಕ ಡಾ.ಸುಭಾಷ್ ಪಟ್ಟಾಜೆ ಉಪನ್ಯಾಸ ನೀಡುವರು. ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆಯಲ್ಲಿ ಕವಿ ಕಾವ್ಯ ಸಂವಾದ ಕಾರ್ಯಕ್ರಮ ನಡೆಯುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net