ಎದೆ ಬಿಗಿದ ಕ್ಷಣಗಳು ಕೃತಿಗೆ ಪ್ರಥಮ ಬಹುಮಾನ

Ksd_Novel
Published on

ಕಾಸರಗೋಡು: ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಬೆಳ್ಳಿಹಬ್ಬ ಹಾಗೂ ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ರಾಜ್ಯಮಟ್ಟದ ಚುಟುಕು ಕೃತಿಗಳ ಸ್ಪರ್ಧೆಯಲ್ಲಿ ಕಾಸರಗೋಡಿನ ಶ್ರೀಕೃಷ್ಣಯ್ಯ ಅನಂತಪುರ ಅವರ ಎದೆ ಬಿಗಿದ ಕ್ಷಣಗಳು ಕೃತಿ ಪ್ರಥಮ ಸ್ಥಾನ ಗಳಿಸಿದೆ.

ಸಾಹಿತಿ, ವಿಮರ್ಶಕ ಡಾ.ಪಿ.ಜಿ.ಕೆಂಪಣ್ಣವರ ಕೃತಿ ಮೌಲ್ಯಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಮಾ.2ರಂದು ಬೆಳಗಾವಿಯಲ್ಲಿ ಜರುಗುವ ಸಮ್ಮೇಳನದಲ್ಲಿ ಬಹುಮಾನ ವಿತರಿಸಲಾಗುವುದು. ಒಟ್ಟು 45 ಕೃತಿಗಳು ಬಂದಿದ್ದು, ಅಂತಿಮ ಹಂತದಲ್ಲಿ ಹದಿನಾರು ಕೃತಿಗಳಲ್ಲಿ ಎದೆ ಬಿಗಿದ ಕ್ಷಣಗಳು ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net