

ಕೋಟ: ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರವು ಸ್ಥಾಪಕ ಸದಾನಂದ ಹೆಬ್ಬಾರ್, ಗುರು ನಾರ್ಣಪ್ಪ ಉಪ್ಪೂರ ಅವರಂತಹ ಯಕ್ಷ ಪಂಡಿತರಿಂದ ರೂಪುಗೊಂಡಿದೆ. ಸದಾನಂದ ಐತಾಳ ನೇತೃತ್ವದಲ್ಲಿ ನಡೆಯುವ ಯಕ್ಷಗಾನ ತರಬೇತಿ ಯಶಸ್ವಿಯಾಗಲಿ ಎಂದು ಯಕ್ಷ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅಭಿಪ್ರಾಯಪಟ್ಟರು.
ಯಕ್ಷಗಾನ ಕಲಾಕೇಂದ್ರ ಆಯೋಜಿಸುತ್ತಿರುವ 2025-26ರ ಯಕ್ಷಗಾನ ಭಾಗವತಿಕೆ, ನೃತ್ಯ, ಮದ್ದಲೆ, ಚಂಡೆ ತರಗತಿ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಸದಾನಂದ ಐತಾಳ ಉಪಸ್ಥಿತರಿದ್ದರು. ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಕೇಶವ ಆಚಾರ್ ವಂದಿಸಿದರು.