ವಿಜಯವಾಣಿ ಸುದ್ದಿಜಾಲ ಬೈಂದೂರು
ಯಕ್ಷಗಾನ ಕಲೆಗೆ ಯುವಜನರು ಒಲವು ತೋರಿಸದ ಹಿನ್ನೆಲೆಯಲ್ಲಿ ಯಕ್ಷಗಾನಕ್ಕೆ ಪ್ರೇಕ್ಷಕರ ಒಗ್ಗೂಡಿಸುವಿಕೆ ಕಷ್ಟ. ರಸಮಂಜರಿ ಕಾರ್ಯಕ್ರಮಕ್ಕೆ ಸಿಗುವ ಬೆಂಬಲ ಯಕ್ಷಗಾನಕ್ಕೂ ಸಿಗಬೇಕಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಬೇಕು ಎಂದು ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಹೇಳಿದರು.
ಉಪ್ಪುಂದದಲ್ಲಿ ಸೋಮವಾರ ಶ್ರೀ ದುರ್ಗಾಪರಮೇಶ್ವರಿ ಯಕ್ಷಕಲಾ ಟ್ರಸ್ಟ್‌ನ 8ನೇ ವಾರ್ಷಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಯು.ಎ.ಮಂಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮದ್ದಳೆಗಾರ ನಾಗೇಶ ಭಂಡಾರಿ ಕರ್ವ, ಹೊಸ್ಕೋಟೆ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ರಾಮ ದೇವಾಡಿಗ, ಸತೀಶ ಶೆಟ್ಟಿ, ದಿನೇಶ ಕುಂದರ್, ಗಿರೀಶ ಶ್ಯಾನುಭಾಗ್, ವಿಷ್ಣು ಆರ್.ಪೈ, ಸುಧಾಕರ ದೇವಾಡಿಗ, ಮಂಜುನಾಥ ದೇವಾಡಿಗ, ಚಂದ್ರಹಾಸ ಗೌಡ, ನಾರಾಯಣ ಬಿಜೂರು ಉಪಸ್ಥಿತರಿದ್ದರು. ಶ್ರೀಧರ ದೇವಾಡಿಗ ಸ್ವಾಗತಿಸಿದರು. ಗಣೇಶ ದೇವಾಡಿಗ ವಂದಿಸಿದರು. ರಾಮಕೃಷ್ಣ ಡಿ. ಕಾರ್ಯಕ್ರಮ ನಿರೂಪಿಸಿದರು. ನಂತರ ಕಂಸವಧೆ ಯಕ್ಷಗಾನ ಪ್ರದರ್ಶನಗೊಂಡಿತು.