ವಾದಿರಾಜರಿಂದ ಸಂಕೀರ್ತನಾ ಪದ್ಯ ರಚನೆ

sankirthane
ಶ್ರೀ ವಾದಿರಾಜ ತುಳಸೀ ನಾಮ ಸಂಕೀರ್ತನಾ ಮಂಡಳಿಯನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಗಳು ಉದ್ಘಾಟಿಸಿದರು. ಪದ್ಮನಾಭ ರಾವ್, ಸುರೇಶ್ ರಾವ್, ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್ ಮೊದಲಾದವರಿದ್ದರು
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ವಾದಿರಾಜರು ಶುದ್ಧ ಕನ್ನಡದಲ್ಲಿ ಪಾರಂಪರಿಕ ಸಂಕೀರ್ತನಾ ಪದ್ಯಗಳನ್ನು ರಚಿಸಿದ್ದಾರೆ. ಇಂದು ಕೆಲವರು ಅದನ್ನು ಮರೆಮಾಚಿ ಕ್ಯಾಸೆಟ್ ಗೀತೆಗಳನ್ನೂ ಅಳವಡಿಸಿಕೊಂಡಿದ್ದಾರೆ ಎಂದು ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.

ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಜ್ಞಾನಮಂದಿರದಲ್ಲಿ ಶ್ರೀ ವಾದಿರಾಜ ತುಳಸಿ ನಾಮ ಸಂಕೀರ್ತನಾ ಮಂಡಳಿಯನ್ನು ಶನಿವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಳಿಕ ಪಡುಬಿದ್ರಿಯಲ್ಲಿ ತುಳಸಿ ಸಂಕೀರ್ತನೆಯ ಇತಿಹಾಸ ಮತ್ತು ನಡೆದು ಬಂದ ದಾರಿಯ ಕುರಿತು ರಂಜಿತ್ ಶರ್ಮ ಮಾಹಿತಿ ನೀಡಿದರು.

ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್ ಅಧ್ಯಕ್ಷತೆ ವಹಿಸಿದ್ದರು. ಅರ್ಚಕರಾದ ರಘುಪತಿ ಆಚಾರ್ಯ, ಗುರುರಾಜ ಆಚಾರ್ಯ, ನಂದಕುಮಾರ್ ಆಚಾರ್ಯ, ಬ್ರಹ್ನಸ್ಥಾನದ ಪಾತ್ರಿಗಳಾದ ಸುರೇಶ್ ರಾವ್, ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಗುರಿಕಾರ ಮುರುಡಿ ಜಗದೀಶ ರಾವ್, ಟ್ರಸ್ಟಿಗಳಾದ ಗುಡ್ಡೆ ವಿಠಲ ರಾವ್, ಶ್ರೀನಿವಾಸ ರಾವ್, ರಾಘವೇಂದ್ರ ರಾವ್, ರವೀಂದ್ರನಾಥ ಶರ್ಮ ಉಪಸ್ಥಿತರಿದ್ದರು. ವೈ.ಎನ್.ರಾಮಚಂದ್ರ ರಾವ್ ಸ್ವಾಗತಿಸಿದರು. ವೈ.ಸುರೇಶ್ ರಾವ್ ವಂದಿಸಿದರು. ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಸಂಕೀರ್ತನಾಗ್ರೇಸರರಿಗೆ ಸನ್ಮಾನ

ಸಂಕೀರ್ತನಾಗ್ರೇಸರ ಪಡುಬಿದ್ರಿ ಪತ್ತನಂಕ ಶ್ರೀನಿವಾಸ ಶರ್ಮ, ರವೀಂದ್ರನಾಥ ಶರ್ಮ, ಜಯಂತ ಶರ್ಮ, ರಂಜಿತ್ ಶರ್ಮ, ಗುರಿಕಾರ ನಟರಾಜ ಪಿ.ಎಸ್. ಅವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಬ್ರಾಹ್ಮಣ ಯುವಕರ ವತಿಯಿಂದ ಶ್ರೀಗಳ ಗೋಶಾಲೆಗೆ ಗೋಗ್ರಾಸ ಕಾಣಿಕೆ ರೂಪದಲ್ಲಿ ಸಮರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net