ಯಕ್ಷಕಲೆ ಮುಂದಿನ ಪೀಳಿಗೆ ಹಸ್ತಾಂತರಿಸುವ ಕಾರ್ಯ : ರಾಘವ ಎಚ್.ಗೇರುಕಟ್ಟೆ ಕಿವಿಮಾತು

New Project (31)
Published on

ಬೆಳ್ತಂಗಡಿ: ಯಕ್ಷಗಾನ ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯ ನಿರಂತರವಾಗಿ ಸಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಎಚ್.ಗೇರುಕಟ್ಟೆ ಹೇಳಿದರು.

ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಭಾರತಿ ನಾಟ್ಯ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ, ಶಾಲಾ ಸೇವಾ ಸಮಿತಿಯ ಮಾರ್ಗದರ್ಶಕ ಎಂ.ಈಶ್ವರ ಭಟ್, ಸೇವಾ ಸಮಿತಿ ಅಧ್ಯಕ್ಷ ಚಂದ್ರಿಕಾ ಭಟ್, ಶಿಕ್ಷಕ ರಕ್ಷಕ ಸಂ ಸದಸ್ಯರಾದ ವಿಜಯ ಮತ್ತು ರಮಾನಂದ, ತರಬೇತಿ ಶಿಕ್ಷಕರಾದ ದೇವಿ ಪ್ರಸಾದ ಆಚಾರ್ಯ ಗುರುವಾಯನಕೆರೆ ಶುಭಹಾರೈಸಿದರು. ಶಾಲಾ ಸೇವಾ ಸಮಿತಿಯ ಶಂಕರ್ ನಾರಾಯಣ ಭಟ್ ಸಾಮೆಗುಳಿ ಮೊದಲಾದವರಿದ್ದರು. ಮುಖ್ಯ ಶಿಕ್ಷಕಿ ಶೋಭಿತಾ ಕೆ.ಆರ್. ಸ್ವಾಗತಿಸಿದರು. ಶಿಕ್ಷಕಿ ಪೂರ್ಣಿಮಾ ನಿರೂಪಿಸಿದರು. ಶಿಕ್ಷಕ ಮಂಜು ಗಣೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net