ಯಕ್ಷ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ

Bel_Yaksha Sambharam
Published on

ಬೆಳ್ತಂಗಡಿ: ಯಕ್ಷಧ್ರುವ ಪಟ್ಲ ಫೌಂಡೇಷನ್​ ಬೆಳ್ತಂಗಡಿ ಟಕದ ಆಶ್ರಯದಲ್ಲಿ ಡಿ.14ರಂದು ಗುರುವಾಯನಕೆರೆ ನವಶಕ್ತಿ ಆವರಣದಲ್ಲಿ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅವರ ನೇತೃತ್ವದಲ್ಲಿ ನಡೆಯಲಿರುವ ಯಕ್ಷಸಂಭ್ರಮ&2024ರ ಆಮಂತ್ರಣ ಪತ್ರಿಕೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಶರತ್​ ಕೃಷ್ಣ ಪಡುವೆಟ್ನಾಯ ಬಿಡುಗಡೆಗೊಳಿಸಿದರು.

ಬೆಳ್ತಂಗಡಿ ಟಕದ ಅಧ್ಯಕ್ಷ ಸುರೇಶ ಶೆಟ್ಟಿ ಲಾಯಿಲ, ಪ್ರಧಾನ ಕಾರ್ಯದರ್ಶಿ ಶಿತಿಕಂಠ ಭಟ್​, ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ, ರುರಾಮ ಶೆಟ್ಟಿ, ಸಲಹೆಗಾರರಾದ ವಸಂತ ಸುವರ್ಣ, ರಾಜು ಶೆಟ್ಟಿ, ರವೀಂದ್ರ ಶೆಟ್ಟಿ, ಜಯಂತ ಶೆಟ್ಟಿ ಕುಂಟಿನಿ, ಮುರಳಿಕೃಷ್ಣ ಆಚಾರ್​, ಜಯಪ್ರಕಾಶ್​, ಪ್ರಕಾಶ ಶೆಟ್ಟಿ ನೊಚ್ಚ, ವಸಂತ ಶೆಟ್ಟಿ, ಕೃಷ್ಣ ಕುಮಾರ್​ ಪಂಜಿರ್ಪು ವಿಶ್ವನಾಥ ಶೆಟ್ಟಿ, ಪ್ರಸಾದ್​ ಶೆಟ್ಟಿ ದಿವಾಕರ ಆಚಾರ್ಯ ಗೇರುಕಟ್ಟೆ, ರವಿ ಚೆಕ್ಕಿತ್ತಾಯ, ವೆಂಕಟ್ರಮಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net