ನವದೆಹಲಿ: ಆಗಸ್ಟ್ 31ರಂದು ಚೀನಾ ಪ್ರದೇಶದಿಂದ ಬಂದಂತಹ ಯಾಕ್ ಪ್ರಾಣಿಗಳ ಹಿಂಡು ಅರುಣಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಭಾರತ ಮತ್ತು ಚೀನಾ ದೇಶಗಳ ಯೋಧರು ಲಡಾಖ್ನ ಪ್ಯಾಂಗೊಂಗ್ ಸರೋವರದ ದಕ್ಷಿಣದಲ್ಲಿ ಜಮಾವಣೆಗೊಳ್ಳುತ್ತಿದ್ದ ಸಮಯದಲ್ಲೇ ಪ್ರಾಣಿಗಳು ಕಂಡುಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ವಾರದವೂ ಸಹ ಇದೇ ಯಾಕ್ ಪ್ರಾಣಿಗಳ ಹಿಂಡು ಗಡಿ ದಾಟಿ ಬಂದಿದ್ದವು. ಈ ವೇಳೆ ಅಲ್ಲಿಯೇ ಇದ್ದ ಭಾರತೀಯ ಸೈನಿಕರು ಅವುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 7 ದಿನಗಳವರೆಗೆ ಅವುಗಳ ಪಾಲನೆ ಮಾಡಿದ್ದ ಯೋಧರು ಮಾನವೀಯತೆ ದೃಷ್ಠಿಯಿಂದ ಚೀನಾ ಮಾಲೀಕರಿಗೆ ಹಿಂದಿರುಗಿಸಿದ್ದರು.
ಇದನ್ನೂ ಓದಿ: ಒಂದೇ ಕೊಠಡಿಯಲ್ಲಿ ಮಾದಕ ನಟಿಯರು: ಸಣ್ಣ ವಿಚಾರಕ್ಕೆ ಕಿತ್ತಾಡಿಕೊಂಡ ಸಂಜನಾ-ರಾಗಿಣಿ?!
ಮೊದಲೇ ಚೀನಾ ಮತ್ತು ಭಾರತ ನಡುವೆ ಗಡಿವಿವಾದ ನಡೆಯುತ್ತಿದ್ದು, ಚೀನಾ ನಿರಂತರವಾಗಿ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ. ಹೀಗಿರುವಾಗ ಚೀನಾದಿಂದ ಬಂದಂತಹ ಜಾನುವಾರುಗಳು ಮುಗ್ಧ ಜೀವಿಗಳೇ ಆಗಿದ್ದರು ಅವು ಚೀನಾಗೆ ಸೇರಿದ್ದಾಗಿದ್ದರಿಂದ ಸಂಶಯ ಬರದೇ ಇರದು. ಈ ಪ್ರಾಣಿಗಳ ಹಿಂದೆ ಯಾವುದಾದರೂ ನಿಗೂಢತೆ ಇದೆಯಾ ಎಂಬ ಅನುಮಾನ ಹೊಗೆಯಾಡ ತೊಡಗಿದೆ.
ಯಾಕ್ ಪ್ರಾಣಿಗಳಲ್ಲಿರಬಹುದಾ ಬೇಹುಗಾರಿಕಾ ಸಾಧನ?
ಯಾಕ್ ಪ್ರಾಣಿಗಳನ್ನು ಇಂಡಿಯನ್ ಆರ್ಮಿ ಮಾನವೀಯತೆ ದೃಷ್ಠಿಯಿಂದ ಹಿಂದಿರುಗಿಸಿತು. ಆದರೆ, ಇದೇ ಯಾಕ್ಗಳಲ್ಲಿ ಬೇಹುಗಾರಿಕಾ ಸಾಧನವಿರಬಹುದಾ ಎಂಬ ಪ್ರಶ್ನೆ ಮೂಡಿದ್ದು, ಅದನ್ನು ತಳ್ಳಿಹಾಕುವಂತಿಲ್ಲ. ಉದಾಹರಣೆ ಕಳೆದ ವರ್ಷದ ಏಪ್ರಿಲ್ನಲ್ಲಿ ನಾರ್ವೆ ಕರಾವಳಿಯಲ್ಲಿ ಬೆಲುಗಾ ತಿಮಿಂಗಿಲವನ್ನು ಹಿಡಿಯಕಲಾಗಿತ್ತು. ತುಂಬಾ ಬುದ್ಧಿವಂತ ಹಾಗೂ ಸ್ನೇಹ ಸ್ವಭಾವದ ಪ್ರಾಣಿಯಾಗಿರುವ ಬೆಲುಗಾ ತಲೆಯ ಸುತ್ತ ಗುಪ್ತಚರ ಇಲಾಖೆಗೆ ಸೂಚನೆ ನೀಡುವಂತಹ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಲಾಗಿತ್ತು.
ಅಮೆರಿಕ ನೌಕಾಪಡೆ ದಶಕಗಳಿಂದಲೂ ತರಬೇತಿ ನೀಡಿದ ಡಾಲ್ಫಿನ್ಗಳನ್ನು ಬಳಸುತ್ತಿದ್ದಾರೆ. ಅವುಗಳಲ್ಲಿ ಸೆನ್ಸಾರ್ಗಳನ್ನು ಅಳವಡಿಸಿ ನೀರಿನಾಳದಲ್ಲಿರುವ ಗಣಿ ಹಾಗೂ ಜಲಂತಾರ್ಗಾಮಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಪ್ರಾಣಿಗಳನ್ನು ಬಳಸಿ ಮಾಹಿತಿಗಳನ್ನು ಪಡೆದ ಅನೇಕ ಉದಾಹರಣೆಗಳನ್ನು ಕಣ್ಣ ಮುಂದೆ ಇರುವಾಗ ಯಾಕ್ ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ ಎಂಬುದು ತಜ್ಞರ ಅಭಿಮತವಾಗಿದೆ. (ಏಜೆನ್ಸೀಸ್)