

ಮೂಲ್ಕಿ: ಗ್ರಾಮದಲ್ಲಿ ಧಾರ್ಮಿಕ ಜಾಗೃತಿ ಜತೆಗೆ ಶಿಸ್ತು ಸಂಸ್ಕಾರ, ಸಂಸ್ಕೃತಿ, ಪರೋಪಕಾರದ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಏಳಿಗೆಗೆ ಶ್ರಮಿಸಿದರೆ ಗ್ರಾಮದ ಪ್ರಗತಿ ಸಾಧ್ಯ ಎಂದು ಧಾರವಾಡ ಕೆಲಗೇರಿ ಸಿದ್ಧ ಸುಕ್ಷೇತ್ರದ ಮಠದ ಶ್ರೀ ಗುರು ಅಭಿನವ ಸಿದ್ಧಲಿಂಗ ಮಹಾಸ್ವಾಮಿ ಹೇಳಿದರು.
ಕೆಎಸ್ ರಾವ್ ನಗರ ಲಿಂಗಪ್ಪಯ್ಯಕಾಡು ಶ್ರೀ ನಿಂದರಕಿ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಧರ್ಮ ಸಂಸ್ಥಾ ಯಜ್ಞಾಶ್ರಮ ಮಠದ 39ನೇ ವರ್ಷದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಕುಮಾರ ಸ್ವಾಮೀಜಿ ಬೆಳವಾಡಿ, ಶ್ರೀ ಕೈವಲ್ಯ ಆನಂದ ಸ್ವಾಮೀಜಿ ಇಡಗಲ್ಲು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್., ಮೂಲ್ಕಿ ನ.ಪಂ. ಸದಸ್ಯರಾದ ಶೈಲೇಶ್ ಕುಮಾರ್, ಭೀಮಾಶಂಕರ್ ಆರ್.ಕೆ., ಉದ್ಯಮಿ ಶ್ರೀನಿವಾಸ ಅಗಡಿ, ನವೀನ್ ರಾಜ್, ಅಶೋಕ್ ಜನನಿ, ಮಠದ ಅಧ್ಯಕ್ಷ ಮಂಜುನಾಥ ಆರ್.ಕೆ., ಪದಾಧಿಕಾರಿಗಳಾದ ವಿಠಲ್ ಎನ್.ಎಂ., ಶಿವಾನಂದ ಆರ್.ಕೆ., ಅಶೋಕ್ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.