More

  ಸಲಿಂಗ ಜೋಡಿಯ ಅದ್ಧೂರಿ ವಿವಾಹ; ಹುಡುಗಿ ಜತೆ ಹುಡುಗಿ ಮದುವೆ

  ನವದೆಹಲಿ: ಸಲಿಂಗ ಸಂಬಂಧ ಅಥವಾ ವಿವಾಹ ವಿಚಾರವನ್ನು ಒಂದೊಂದು ದೇಶದಲ್ಲೂ ಒಂದೊಂದು ದೃಷ್ಟಿಕೋನದಲ್ಲಿ ವಿಶ್ಲೇಷಿಸಲಾಗುತ್ತದೆ. ಆದರೆ ಭಾರತದಲ್ಲಿ ಇದನ್ನು ನೋಡುವ ದೃಷ್ಟಿಕೋನವೇ ಬೇರೆ. ಭಾರತದಲ್ಲಿ ಸಲಿಂಗ ವಿವಾಹ ಮಾನ್ಯತೆ ಇಲ್ಲ, ವಿದೇಶಗಳಲ್ಲಿ ಇದೆಲ್ಲಾ ಮಾಮೂಲಿ ಎನಿಸಿದ್ದು, ಸಲಿಂಗಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕವಾಗಿ ಸುದ್ದಿಯಾಗಿದೆ.

  WWE ಸೂಪರ್‌ಸ್ಟಾರ್ ಡೇರಿಯಾ ಬೆರೆನಾಟೊ ಅವರು ದೀರ್ಘಕಾಲದ ಗೆಳತಿಯಾಗಿರುವ ಫಿಟ್‌ನೆಸ್ ಮಾಡೆಲ್ ಟೋನಿ ಕಸ್ಸನೋ ಅವರೊಂದಿಗೆ ಫೆಬ್ರವರಿ 10 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಶನಿವಾರ ಡೆವಿಲ್ಲೆ ಅವರ ತವರು ರಾಜ್ಯವಾದ ನ್ಯೂಜೆರ್ಸಿಯಲ್ಲಿರುವ ದಿ ಲೆಗಸಿ ಕ್ಯಾಸಲ್‌ನಲ್ಲಿ 140 ಅತಿಥಿಗಳು ಭಾಗವಹಿಸಿದ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.

  ರೆಸ್ಲರ್‌ಗಳಾದ ಷಾರ್ಲೆಟ್ ಫ್ಲೇರ್ ಮತ್ತು ಆಂಡ್ರೇಡ್, ಬೇಲಿ, ಮಾಂಟೆಜ್ ಫೋರ್ಡ್ ಮತ್ತು ಬಿಯಾಂಕಾ ಬೆಲೈರ್, ಲಿವ್ ಮೋರ್ಗಾನ್, ಮೆಕೆಂಜಿ ಮಿಚೆಲ್, ಮ್ಯಾಟ್ ಕಾರ್ಡೋನಾ ಮತ್ತು ಚೆಲ್ಸಿಯಾ ಗ್ರೀನ್, ಮ್ಯಾಂಡಿ ರೋಸ್ ಮತ್ತು WWE ನಿರೂಪಕ ವಿಕ್ ಜೋಸೆಫ್ ಸೇರಿದಂತೆ ರೆಸ್ಲರ್ ಲೋಕದ ಅನೇಕರು ಈ ವಿವಾಹ ಸಮಾರಂಭದಲ್ಲಿ ಹಾಜರಿದ್ದರು.

  ಈ ಸಲಿಂಗಿ ಜೋಡಿ ತಮ್ಮ ಜೀವನದ ಈ ವಿಶೇಷ ಕ್ಷಣಗಳ ಫೋಟೋಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಈ ನವಜೋಡಿಗೆ ಶುಭ ಹಾರೈಸಿದ್ದಾರೆ.

  ಆಫರ್​.. ಆಫರ್​..ಮಗುವಿಗೆ ಜನ್ಮ ನೀಡಿದ್ರೆ ಸಿಗುತ್ತೆ 62 ಲಕ್ಷ ರೂಪಾಯಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts