blank

WPL 2025| RCB ಸೇರಿದಂತೆ ಐದು ಫ್ರಾಂಚೈಸಿಗಳು ರಿಟೇನ್​ ಮಾಡಿರುವ ಆಟಗಾರ್ತಿಯರ ಪಟ್ಟಿ ಹೀಗಿದೆ

WPL

ಮುಂಬೈ: 2025ರಲ್ಲಿ ಮಹಿಳಾ ಪ್ರೀಮಿಯರ್​ ಲೀಗ್​ಗೆ (WPL) ಐಪಿಎಲ್​ನಂತೆಯೇ ತಯಾರಿ ಆರಂಭವಾಗಿದ್ದು, ಮಿನಿ ಹರಾಜಿನ (Mini Auction) ಪ್ರಕ್ರಿಯೆಗೆ ಸಂಬಂಧಿಸಿದ ಕೆಲಸಗಳು ಈಗಾಗಲೇ ಶುರುವಾಗಿವೆ. ಅದರಂತೆ ಹಾಲಿ ಚಾಂಪಿಯನ್ಸ್​ ಆರ್​ಸಿಬಿ (RCB) ಸೇರಿದಂತೆ ಐದು ಫ್ರಾಂಚೈಸಿಗಳು ಇಂದು (ನವೆಂಬರ್​ 07) ರಿಟೇನ್​ ಪಟ್ಟಿಯನ್ನು (Retention List) ಬಿಡುಗಡೆ ಮಾಡಿವೆ.

ಡಬ್ಲ್ಯುಪಿಎಲ್​ನಲ್ಲಿ (WPL) ಮೆಗಾ ಹರಾಜು ಬದಲಿಗೆ ಮಿನಿ ಆಕ್ಷನ್​ ಇರಲಿದೆ. ಹೀಗಾಗಿ ಫ್ರಾಂಚೈಸಿಗಳು ಗರಿಷ್ಠ ಆಟಗಾರ್ತಿಯರನ್ನು ತಮ್ಮಲ್ಲೇ ಉಳಿಸಿಕೊಂಡು, ಕೆಲವು ಆಟಗಾರ್ತಿಯರನ್ನು ತಂಡದಿಂದ ಕೈಬಿಡಬೇಕಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಮುಂಬೈ ಇಂಡಿಯನ್ಸ್ (MI), ಯುಪಿ ವಾರಿಯರ್ಸ್ (UPW), ಗುಜರಾತ್ ಜೈಂಟ್ಸ್ (GG) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ತಮ್ಮ ರಿಟೇನ್​ ಪಟ್ಟಿಯನ್ನು (Retention List) ಬಿಡುಗಡೆ ಮಾಡಿವೆ.

ಅದರಂತೆ ಯುಪಿ ವಾರಿಯರ್ಸ್ 15 ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್​ ತಂಡದಲ್ಲಿ 14 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ನಾಲ್ವರು ಆಟಗಾರ್ತಿಯರನ್ನು ಬಿಡುಗಡೆ ಮಾಡಿದ್ದರೆ, ಯುಪಿ ವಾರಿಯರ್ಸ್​ ಒಟ್ಟು ಏಳು ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ.

ರಿಟೇನ್​ ವಿವರ ಹೀಗಿದೆ 

ಆರ್​ಸಿಬಿ (RCB)

ರಿಟೇನ್​: ಸ್ಮೃತಿ ಮಂಧಾನ, ಎಸ್ ಮೇಘನಾ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ದಾನಿ ವ್ಯಾಟ್. 

ರಿಲೀಸ್ಡ್​: ದಿಶಾ ಕಸತ್, ಇಂದ್ರಾಣಿ ರಾಯ್, ನಡಿನ್ ಡಿ ಕ್ಲರ್ಕ್, ಶುಭಾ ಸತೀಶ್, ಶ್ರದ್ಧಾ ಪೋಕರ್ಕರ್, ಸಿಮ್ರಾನ್ ಬಹದ್ದೂರ್, ಹೀದರ್ ನೈಟ್.

ಡೆಲ್ಲಿ ಕ್ಯಾಪಿಟಲ್ಸ್ (DC) 

ರಿಟೇನ್​: ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರಾಡ್ರಿಗಸ್, ಜೆಸ್ ಜೊನಾಸೆನ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ ಭಾಟಿಯಾ, ಟೈಟಾಸ್ ಸಾಧು, ಅನ್ನಾಬೆಲ್ ಸದರ್ಲ್ಯಾಂಡ್. 

ರಿಲೀಸ್ಡ್​: ಲಾರಾ ಹ್ಯಾರಿಸ್, ಪೂನಂ ಯಾದವ್, ಅಪರ್ಣಾ ಮೊಂಡಲ್, ಅಶ್ವನಿ ಕುಮಾರಿ. 

ಮುಂಬೈ ಇಂಡಿಯನ್ಸ್​ (MI) 

ರಿಟೇನ್​: ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ಜಿಂಟಿಮಣಿ ಕಲಿತಾ, ನ್ಯಾಟ್ ಸ್ಸಿವರ್-ಬ್ರಂಟ್, ಪೂಜಾ ವಸ್ತ್ರಾಕರ್, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ, ಶಬ್ನಿಮ್ ಇಸ್ಮಾಯಿಲ್, ಎಸ್ ಸಜನಾ, ಅಮನ್‌ದೀಪ್ ಕೌರ್, ಕೀರ್ತನಾ ಬಾಲಕೃಷ್ಣ. 

ರಿಲೀಸ್ಡ್​: ಇಸ್ಸಿ ವಾಂಗ್, ಫಾತಿಮಾ ಜಾಫರ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ. 

ಗುಜರಾತ್​ ಜೈಂಟ್ಸ್​ (GG) 

ರಿಟೇನ್​: ಆಶ್ಲೀಗ್ ಗಾರ್ಡನರ್, ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಮನ್ನತ್ ಕಶ್ಯಪ್, ಸಯಾಲಿ ಸತ್ಗರೆ, ಭಾರತಿ ಫುಲ್ಮಾಲಿ. 

ರಿಲೀಸ್ಡ್​: ಸ್ನೇಹ ರಾಣಾ, ಕ್ಯಾಥರಿನ್ ಬ್ರೈಸ್, ತ್ರಿಶಾ ಪೂಜಿತಾ, ವೇದಾ ಕೃಷ್ಣಮೂರ್ತಿ, ತರನ್ನುಮ್ ಪಠಾಣ್ ಮತ್ತು ಲಿಯಾ ತಹುಹು. 

ಯುಪಿ ವಾರಿಯರ್ಸ್​ (UPW) 

ರಿಟೇನ್​: ಅಲಿಸ್ಸಾ ಹೀಲಿ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ (ಉಪನಾಯಕಿ), ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ಚಾಮರಿ ಅಟಪಟ್ಟು, ಕಿರಣ್ ನವಗಿರೆ, ರಾಜೇಶ್ವರಿ ಗಾಯಕ್‌ವಾಡ್, ಅಂಜಲಿ ಸರ್ವಾಣಿ, ಉಮಾ ಛೆಟ್ರಿ, ಪೂನಮ್ ಥಾಕೋನರ್, ಸಮಾ ಖ್ಮಾಕೊಹರ್ ಸುಲ್ತಾನಾ, ವೃಂದಾ ದಿನೇಶ್.

ರಿಲೀಸ್ಡ್​: ಲಕ್ಷ್ಮಿ ಯಾದವ್, ಪಾರ್ಶ್ವಿ ಚೋಪ್ರಾ, ಲಾರೆನ್ ಬೆಲ್, ಎಸ್ ಯಶಶ್ರೀ.

WPL 2025 Retention| 7 ಆಟಗಾರ್ತಿಯರಿಗೆ ತಂಡದಿಂದ ಕೊಕ್​ ಕೊಟ್ಟ RCB; ಉಳಿದಿರುವವರು ಇವರೇ ನೋಡಿ

ಅದ್ಧೂರಿಯಾಗಿ ಎರಡನೇ ಮದುವೆ ಮಾಡಿಕೊಂಡ ಜೊತೆ ಜೊತೆಯಲ್ಲಿ ಖ್ಯಾತಿಯ Meera; ವೈವಾಹಿಕ ಜೀವನದ ಬಗ್ಗೆ ನಟಿ ಹೇಳಿದ್ದಿಷ್ಟು

 

 

Share This Article

ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್​ ವಿಧಾನ | Health Tips

10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…

ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್​ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars

Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…

ರಾಗಿಮುದ್ದೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ!; ತಿಳಿದ್ರೆ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಮಿಸ್​ ಮಾಡೋದೆ ಇಲ್ಲ | Health Tips

ಚಳಿಗಾಲವು ಆರಂಭವಾಗಿದ್ದು ಭವಿಷ್ಯದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ತೀವ್ರ ಚಳಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ…