ಅದ್ಧೂರಿಯಾಗಿ ಎರಡನೇ ಮದುವೆ ಮಾಡಿಕೊಂಡ ಜೊತೆ ಜೊತೆಯಲ್ಲಿ ಖ್ಯಾತಿಯ Meera; ವೈವಾಹಿಕ ಜೀವನದ ಬಗ್ಗೆ ನಟಿ ಹೇಳಿದ್ದಿಷ್ಟು

Manasa Manohar
Published on

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಬ್ಲಾಕ್​ಬಸ್ಟರ್​ ಸೀರಿಯಲ್​ ಜೊತೆ ಜೊತೆಯಲ್ಲಿ ಧಾರವಾಹಿಯ ಮೂಲಕ ಮನೆ ಮಾತಾಗಿದ್ದ ಮೀರಾ (Meera) ಪಾತ್ರಧಾರಿ ಮಾನಸ ಮನೋಹರ್​ (Manasa Manohar) ಅದ್ದೂರಿಯಾಗಿ ಎರಡನೇ ಮದುವೆಯಾಗಿದ್ದಾರೆ. ನಟ ಈ ಕುರಿತಾದ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಧಾರಾವಾಹಿಗಳಲ್ಲಿ ಬ್ಯುಸಿಯಿರುವ ಮಾಸನ (Manasa) ಪ್ರೀತಮ್​ ಚಂದ್ರ (Preetham Chandra) ಎಂಬುವವರ ಜೊತೆ ಮದುವೆ ಮಾಡಿಕೊಂಡಿದ್ದಾರೆ. ಪತಿ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ತಮ್ಮ ಎರಡನೇ ಮದುವೆ ಕುರಿತು ನಟಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಈ ಕುರಿತಾದ ವಿಡಿಯೋ ಒಂದನ್ನು ಪೋಸ್ಟ್​ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಟಿ, ಇದು ನನ್ನ ಜೀವನದಲ್ಲಿ ಮರೆಯಲಾರದ ದಿನ (ನವೆಂಬರ್​ 06). ನನ್ನ ನಿಶ್ಚಿತಾರ್ಥದ ಫೋಟೋಗಳನ್ನು ಹಾಕಿದಾಗ ಎಲ್ಲರೂ ಪಾಸಿಟಿವ್​ ಕಮೆಂಟ್ಸ್​ ಹಾಕುವ ಮೂಲಕ ನನ್ನನ್ನು ಹರಸಿದ್ರಿ. ಪ್ರೀತಿ ಬಗ್ಗೆ ಯಾರು ನಂಬಿಕೆ ಕಳೆದುಕೊಳ್ಳಬೇಡಿ. ಜೀವನದಲ್ಲಿ ಏನೇ ಆಗಿದ್ರೂ ನಿಮಗೆ ದಕ್ಕ ಭೇಕಾಗಿರುವುದು ಸಿಕ್ಕೇ ಸಿಗುತ್ತದೆ ಎಂದು ನಟಿ ತಮ್ಮ ಪತಿಯೊಂದಿಗಿರುವ ವಿಡಿಯೋವನ್ನು ಪೋಸ್ಟ್​ ಮಾಡಿ ತಮ್ಮ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ.

ಇನ್ನೂ ಮಾನಸ (Manasa) ಅವರ ಪತಿ ಪ್ರೀತಮ್ ಚಂದ್ರ (Preetham Chandra) ಅವರು ಫುಟ್​ಬಾಲ್ ಪ್ಲೇಯರ್ (FootBall Player) ಆಗಿದ್ದಾರೆ. ಅವರು ಫುಟ್ ಬಾಲ್ ಅಕಾಡೆಮಿ ಕೂಡ ನಡೆಸುತ್ತಿದ್ದಾರೆ. ನವೆಂಬರ್​ 06ರಂದು ರೆಸಾರ್ಟ್ ಒಂದರಲ್ಲಿ ಇವರ ವಿವಾಹ ಮಹೋತ್ಸವ ಜರುಗಿದ್ದು, ಕುಟುಂಬಸ್ಥರು ಹಾಗೂ ಆಪ್ತರು ಉಪಸ್ಥಿತಿರಿದ್ದರು. ಸದ್ಯ ಲಕ್ಷ್ಮೀ ನಿವಾಸ ಹಾಗೂ ಶಾಂಭವಿ ಧಾರವಾಹಿಯಲ್ಲಿ ಮಾಸನ ಬ್ಯುಸಿಯಿದ್ದು, ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net