

ಕೋಲಾರ: ವಿಶೇಷ ಪೂಜೆ ಮಾಡಿಸುವ ನೆಪದಲ್ಲಿ ಭಕ್ತನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಪೂಜಾರಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನೇ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಬಂಗಾರಪೇಟೆ ಪಟ್ಟಣದ ಎಲೆಮಲ್ಲಪ್ಪ ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರ ಬೆಳಗ್ಗೆ 10 ಗಂಟರ ಸುಮಾರಿಗೆ ಈ ಘಟನೆ ನಡೆದಿದೆ.
ಅರ್ಚಕ ವಿಶ್ವನಾಥ್ ಎಂಬುವವರು ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರು. ದೇವಾಲಯಕ್ಕೆ ಭಕ್ತನ ಸೋಗಿನಲ್ಲಿ ಮಾಸ್ಕ್ ಧರಿಸಿಕೊಂಡು ಬಂದಿದ್ದ ವ್ಯಕ್ತಿ, ನೂತನ ಅಂಗಡಿ ಆರಂಭ ಮಾಡುತ್ತಿದ್ದೇನೆ. ನನಗೆ ಅರ್ಚನೆ ಮಾಡಿಕೊಡಿ ಎಂದ.
ಪೂಜೆ ಮಾಡಿ ಮಂಗಳಾರತಿ ಕೊಡಲು ಬಂದ ಪೂಜಾರಿಯ ಮುಖಕ್ಕೆ ಮಂಕುಬೂದಿ ಎರಚಿದ ಕಳ್ಳನು ಪೂಜಾರಿಯ ಕತ್ತನಿಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಸರದೋಚಿ ಪರಾರಿಯಾಗಿದ್ದಾನೆ. ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.