ಶವದ ಜತೆ ಸೆಕ್ಸ್​ ಮಾಡಿ ವಿಕೃತಿ ಮೆರೆದ ! ಬೆಚ್ಚಿಬೀಳಿಸುತ್ತೆ ಈ ಘಟನೆ

rape
Published on

ಚಿಕ್ಕಬಳ್ಳಾಪುರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯನ್ನು ಕೊಂದು ಮೃತದೇಹದ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆಂಧ್ರ ಮೂಲದ ಆರೋಪಿಯನ್ನು ಬಟ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅ.19ರಂದು ಚಿಂತಾಮಣಿ ತಾಲೂಕಿನ ಕೋನಾಪುರ ಗ್ರಾಮದ ಜಮೀನಿನಲ್ಲಿ ನರೇಶ್ ಎಂಬುವರ ಪತ್ನಿ ಶೋಭಾ(27) ಕೊಲೆಯಾಗಿದ್ದರು. ಈಕೆಯ ಶವದ ಮೇಲೆ ಸೆಕ್ಸ್​ ಮಾಡಿ ವಿಕೃತಿ ಮೆರೆದಿದ್ದ ಆರೋಪಿ ತಲೆಮರೆಸಿಕೊಂಡಿದ್ದ.

ಅಂದು ಏನಾಯ್ತು?: ವಾಹನ ಚಾಲಕನಾಗಿದ್ದ ಶಂಕರಪ್ಪ ಪತ್ನಿಯನ್ನು ತೊರೆದು ಶೋಭಾ ಜತೆ ಸ್ನೇಹ ಬೆಳೆಸಲು ಮುಂದಾಗಿದ್ದ. ಅ.19ರಂದು ನರೇಶ್​ರ ಮೊದಲ ಪತ್ನಿ ಶೋಭಾ ಮತ್ತು 2ನೇ ಪತ್ನಿ ಇಬ್ಬರೂ ಹೊಲದಲ್ಲಿ ನೆಲಗಡಲೆ ಕೀಳುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಶೋಭಾಳ ಸವತಿ ಹಸುಗಳನ್ನು ಎಳೆದುಕೊಂಡು ಮನೆಗೆ ಹೋಗಿದ್ದರು. ಇದೇ ವೇಳೆ ಹೊಂಚು ಹಾಕಿ ಕಾಯುತ್ತಿದ್ದ ಶೆಟ್ಟಿಹಳ್ಳಿಯ ಕೆ.ಎನ್.ಶಂಕರಪ್ಪ ಜಮೀನಿನಲ್ಲಿದ್ದ ಒಂಟಿ ಮಹಿಳೆ ಬಳಿ ಬಂದು, ಲೈಂಗಿಕ ಸಂಪರ್ಕ ಹೊಂದುವಂತೆ ಪೀಡಿಸಿದ್ದ. ಆಕೆ ನಿರಾಕರಿಸಿದಾಗ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಮೃತದೇಹದ ಮೇಲೆ ಅತ್ಯಾರವೆಸಗಿ ಪರಾರಿಯಾಗಿದ್ದ.

ಆರೋಪಿ ಶಂಕರ್​.
ಆರೋಪಿ ಶಂಕರ್​.

ರಾತ್ರಿಯಾದರೂ ಶೋಭಾ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪತಿ ನರೇಶ್ ಹೊಲದ ಬಳಿ ಹುಡುಕಿದಾಗ ಶವ ಪತ್ತೆಯಾಗಿತ್ತು.

ಸಿಸಿಟಿವಿಯಲ್ಲಿ ಚಿತ್ರೀಕರಣ: ಹೊಲದಲ್ಲಿ ಶೋಭಾ ಕೆಲಸ ಮಾಡುತ್ತಿದ್ದಾಗ ಆರೋಪಿ ಶಂಕರಪ್ಪ ಮಾತನಾಡಿಸಿದ್ದನ್ನು ಮಗಳು ನೋಡಿದ್ದಳು. ಅಲ್ಲದೆ ಶೋಭಾಳ ಬಳಿ ಶಂಕರ್ ಕೆಟ್ಟದಾಗಿ ವರ್ತಿಸುತ್ತಿದ್ದದ್ದನ್ನು ನೋಡಿರುವುದಾಗಿ ಕೋನಾಪುರದ ಇಬ್ಬರು ವ್ಯಕ್ತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನುಮಾನ ಬಂದ ಪೊಲೀಸರು ಬಟ್ಲಹಳ್ಳಿ ಬಾರ್‌ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಈತನ ಸುಳಿವು ಸಿಕ್ಕಿತ್ತು.

ಆರೋಪಿ ಶಂಕರ್​ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎನ್.ಶ್ರೀನಿವಾಸಪ್ಪ, ಬಟ್ಲಹಳ್ಳಿ ಠಾಣೆ ಪಿಎಸ್‌ಐ ಪಾಪಣ್ಣ ಹಾಗೂ ಸಿಬ್ಬಂದಿಯನ್ನು ಎಸ್‌ಪಿ ಜಿ.ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net