ಒಂದು ಪ್ಲೇಟ್​ಗೆ 15 ಸಾವಿರ ರೂಪಾಯಿ! ಇದು ಭೂಮಿಯ ಅತ್ಯಂತ ದುಬಾರಿ ಫ್ರೆಂಚ್​ ಫ್ರೈಸ್​!

frenchfries
Published on

ನ್ಯೂ ಯಾರ್ಕ್​ : ಹಲವು ದುಬಾರಿ ತಿನಿಸುಗಳ ವರ್ಲ್ಡ್​ ರೆಕಾರ್ಡುಗಳನ್ನು ಹೊಂದಿರುವ ಅಮೆರಿಕದ ರೆಸ್ಟೊರೆಂಟೊಂದು ಇದೀಗ ಎಕ್ಸಾಟಿಕ್ ಆದ ಫ್ರೆಂಚ್​ ಫ್ರೈಸ್​ಅನ್ನು ತನ್ನ ಮೆನುಗೆ ಸೇರಿಸಿದೆ. ಆಶ್ಚರ್ಯವೆಂದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಲೆ ಬಿಸಿ ಮಾಡಿಕೊಳ್ಳುವ ಜನರ ನಡುವಲ್ಲೇ, ಈ ದುಬಾರಿ ಡಿಶ್​ಗಾಗಿ ಸಾಲುಗಟ್ಟುತ್ತಿರುವ ಜನರು ಬಹಳಷ್ಟಿದ್ದಾರಂತೆ!

ಒಂದೂವರೆ ವರ್ಷದ ಕರೊನಾ ಲಾಕ್​ಡೌನಿನ ನಂತರ ಪುನರಾರಂಭಗೊಂಡಿರುವ ಅಮೆರಿದ ಮ್ಯಾನಹಟ್ಟನ್​ನಲ್ಲಿರುವ 'ಸೆರೆಂಡಿಪಿಟಿ 3' ರೆಸ್ಟೊರೆಂಟಲ್ಲಿ ಒಂದು ಪ್ಲೇಟಿಗೆ ಸುಮಾರು 15 ಸಾವಿರ ರೂಪಾಯಿ (200 ಡಾಲರ್​) ಬೆಲೆಯುಳ್ಳ ಆಲೂಗೆಡ್ಡೆ ಫ್ರೈಸ್​ ಸಿಗುತ್ತಿದೆ. ಈ ರೆಸ್ಟೊರೆಂಟ್, ಅದಾಗಲೇ ಜಗತ್ತಿನ ಅತಿ ದುಬಾರಿ ಬರ್ಗರ್​ (295 ಡಾಲರ್) ಮತ್ತು ಅತಿ ದುಬಾರಿ ಐಸ್​ಕ್ರೀಂ ಸಂಡೇ(1000 ಡಾಲರ್)ಗಳನ್ನು ಮಾರುವ ತಾಣವಾಗಿದೆ. ಇದೀಗ ಈ ದುಬಾರಿ ತಿನಿಸುಗಳ ಪಟ್ಟಿಗೆ ತನ್ನ ದುಬಾರಿ ಫ್ರೈಸ್​​ಅನ್ನೂ ಸೇರಿಸಿದೆ.

ಚಿಪ್ಪರ್​ಬೆಕ್​ ಆಲೂಗೆಡ್ಡೆಯಿಂದ ಮಾಡಿದ 'ಕ್ರೀಮ್​ ಡೆ ಲಾ ಕ್ರೀಮ್​ ಪೊಮ್ಮೆಸ್ ಫ್ರೈಟ್ಸ್​' ಎಂಬ ಹೆಸರಿನ ಈ ಫ್ರೆಂಚ್​ ಫ್ರೈಸ್​ ಮಾದರಿಯ ಡಿಶ್ಅನ್ನು​ ಗೂಸ್​ ಫ್ಯಾಟ್​ನಲ್ಲೇ ಕರಿಯುತ್ತಾರಂತೆ. ಅಪರೂಪದ ಟ್ರಫಲ್ಸ್​ ಮಶ್ರೂಮ್ಸ್​ ತುಂಡುಗಳಿಂದ, ಟ್ರಫಲ್ಸ್​ ಸಾಲ್ಟ್​ ಮತ್ತು ಆಯಿಲ್​ನಿಂದ ಗಾರ್ನಿಶ್ ಮಾಡಿ, ನಂತರ ಎಡಿಬಲ್ ಗೋಲ್ಡ್​(ಚಿನ್ನ) ಸ್ಪ್ರಿಂಕಲ್ ಮಾಡಿ ಮಾರ್ನೇ ಚೀಸ್​ ಡಿಪ್​ನೊಂದಿಗೆ ತಿನ್ನಲು ನೀಡುತ್ತಾರಂತೆ! ಇತ್ತೀಚೆಗೆ ಗಿನ್ನೀಸ್ ವರ್ಲ್ಡ್​ ರೆಕಾರ್ಡ್ಸ್​ನವರೇ ದೃಢೀಕರಿಸಿರುವಂತೆ ಭೂಮಿಯ ಮೇಲೆ ಸಿಗುವ ಅತ್ಯಂತ ದುಬಾರಿ ಫ್ರೈಸ್ ಇದಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net