More

    ವಿಶ್ವ ಪಾಸ್​ವರ್ಡ್​ ದಿನಾಚರಣೆ; ಸುರಕ್ಷತೆಯ ಸಂದೇಶದೊಂದಿಗೆ ಮೀಮ್​ ಹಂಚಿಕೊಂಡ ಸಚಿವ!

    ಕೊಹಿಮಾ: ರಾಜಕಾರಣಿಗಳು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಕೆಲವೊಮ್ಮೆ ತಮ್ಮ ಟ್ವೀಟ್​ ಹಾಗೂ ಪೋಸ್ಟ್​ಗಳ ಮೂಲಕ ಹೊಸತನದ ಕುರಿತು ಚರ್ಚೆಯನ್ನು ಹುಟ್ಟುಹಾಕುತ್ತಿರುತ್ತಾರೆ.

    ಇನ್ನು ಈ ವಿಚಾರಕ್ಕೆ ಬಂದರೆ ನಾಗಾಲ್ಯಾಂಡ್​ ಸರ್ಕಾರದ ಪ್ರವಾಸೋದ್ಯಮ, ಉನ್ನತ ಶಿಕ್ಷಣ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಇದಕ್ಕೆ ಹೊರತಾಗಿಲ್ಲ ಮತ್ತು ಇವರ ಪೋಸ್ಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕಾರಾತ್ನಕ ಪ್ರತಿಕ್ರಿಯೆ ಪಡೆಯುತ್ತವೆ.

    ವಿಶ್ವ ಪಾಸ್​ವರ್ಡ್​​ ದಿನಾಚರಣೆ

    ಈ ಕುರಿತು ಟ್ವೀಟ್​ ಮಾಡಿರುವ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ WorldPasswordDay ಅಂಗವಾಗಿ ನಿಮ್ಮ ಪಾಸ್​ವರ್ಡ್​ ಅನ್ನು GirlfriendName123@ ಎಂದು ಉಪಯೋಗಿಸುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

    ಇದನ್ನೂ ಓದಿ: ಜಮ್ಮು-ಕಾಶ್ಮಿರದಲ್ಲಿ ಸೇನಾ ಹೆಲಿಕಾಪ್ಟರ್​ ಪತನ; ಇಬ್ಬರಿಗೆ ಗಾಯ

    ಇಲ್ಲವಾದಲ್ಲಿ ಇಂದೇ ಬದಲಾಯಿಸಿ ಮತ್ತು ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ ಎಂದು ಮೀಮ್​ನೊಂದಿಗೆ ಸಂದೇಶ ಹೊಂಚಿಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​

    ಇನ್ನು ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಮತ್ತು ಅವರ ಪೋಸ್ಟ್​ಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿರುತ್ತವೆ.

    ಸಾಮಾಜಿಕ ಜಾಲತಾಣಗಳಲ್ಲಿ ಮೀಮ್​ನೊಂದಿಗೆ ಜೀವನದ ಸಂದೇಶವನ್ನು ಸಾರುತ್ತಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts