ವಿಶ್ವ ವೈದ್ಯರ ದಿನಾಚರಣೆ: ಐ.ಎಫ್.ಐ.ಎಮ್ ಕಾಲೇಜು ವತಿಯಿಂದ ಅಭಿನಂದನಾ ಕಾರ್ಯಕ್ರಮ

Doctors Day
Published on

ಬೆಂಗಳೂರು: ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಕರೊನಾ ಸಂಧರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಎಲೆಕ್ಟ್ರಾನಿಕ್ ಸಿಟಿಯ ಐ.ಎಫ್.ಐ.ಎಮ್ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಕರೊನಾ ಮಾಹಾಮಾರಿ ತಡೆಯಲು ಇಡೀ ದೇಶದಲ್ಲಿ ವೈದ್ಯರು, ನರ್ಸ್ ಗಳು, ಸೇರಿದಂತೆ ಹಲವಾರು ಜನ ನಿರಂತರವಾಗಿ ಶ್ರಮಿಸಿದ್ದಾರೆ. ತಮ್ಮ ಕುಟುಂಬವನ್ನು ಲೆಕ್ಕಿಸದೆ ಅದೆಷ್ಟೋ ಜನ ವೈದ್ಯರು ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ. ಅಂತಹ ವೈದ್ಯರಿಗೆ ಹಾಗೂ ನರ್ಸ್ ಸೇರಿದಂತೆ ಆರೋಗ್ಯ ಸಿಬ್ಬಂದಿಗೆ ವಿಶ್ವ ದಿನಾಚರಣೆ ಅಂಗವಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ಐ.ಎಫ್.ಐ.ಎಮ್ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥಯ್ಯ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎನ್ನುವ ಹೆಸರಿನಂತೆ ನಮ್ಮ ವೈದ್ಯರ ಕಾರ್ಯವೈಖರಿಯನ್ನು ಕೇವಲ ವೈದ್ಯರ ದಿನದಂದು ಮಾತ್ರವಲ್ಲ ದಿನವೂ ಕೂಡ ನೆನಸಿಕೊಳ್ಳಬೇಕು. ವಿಶ್ವ ವೈದ್ಯರ ದಿನದ ಅಂಗವಾಗಿ ಎಲ್ಲರಿಗೂ ಕರೊನಾ ವಾರಿಯರ್ಸ್ ಗಳಾಗಿ ತಮ್ಮ ಜೀವವನ್ನು ಲೆಕ್ಕಿಸದೆ ಸೇವೆ ಸಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net