ಭಾರತಕ್ಕೆ ನೆರವಾಗುವಂತೆ ವಿಶ್ವಕಪ್ ಫೈನಲ್ ಪಿಚ್ ನಿರ್ಮಾಣ; ಟೀಮ್​ ಇಂಡಿಯಾ ಮಾಜಿ ಕೋಚ್​ ಹೇಳಿದ್ದಿಷ್ಟು

Team India
Published on

ನವದೆಹಲಿ: ಜೂನ್ 29ರಂದು ಮುಕ್ತಾಯಗೊಂಡ ಚುಟುಕು ವಿಶ್ವ ಸಮರದಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ ಭಾರತ ತಂಡವು ಕಪ್​ ಬರವನ್ನು ನೀಗಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಕೆಲವು ತಿಂಗಳ ಹಿಂದೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಎಡವಿದ್ದ ಭಾರತ ತಂಡವು ಅಜೇಯವಾಗಿ ಕಪ್​ ಗೆಲ್ಲುವ ಕನಸನ್ನು ಆಸ್ಟ್ರೇಲಿಯಾ ಭಗ್ನಗೊಳಿಸಿತ್ತು. ಅಹದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಪಿಚ್​ಅನನ್ಉ ನಿಧಾನಗೊಳಿಸಲಾಗಿತ್ತು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಫ್​ ಆರೋಪಿಸಿದ್ದರು.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಕೈಫ್​, ನಾನು ಮೂರು ದಿನಗಳ ಕಾಲ ಗುಜರಾತ್​ನಲ್ಲಿದ್ದೆ. ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರು ಫೈನಲ್‌ಗೆ ಮುಂಚಿತವಾಗಿ 3 ದಿನಗಳ ಕಾಲ ಪ್ರತಿದಿನ ಪಿಚ್ ಅನ್ನು ಪರಿಶೀಲಿಸುತ್ತಿದ್ದರು. ಪಿಚ್​ನ ಬಣ್ಣ ಬದಲಾಗುತ್ತಿರುವುದನ್ನು ನಾನು ಗಮನಿಸಿದ್ದೆ. ಪಿಚ್​ಗೆ ಯಾವುದೇ ರೀತಿಯ ವಾಟರಿಂಗ್​ ಮಾಡಿರಲಿಲ್ಲ. ಭಾರತವು ಆಸ್ಟ್ರೇಲಿಯಾಕ್ಕೆ ನಿಧಾನಗತಿಯ ಪಿಚ್​ ನೀಡಲು ಬಯಸಿತ್ತು. ಜನರು ಇದನ್ನು ನಂಬುವುದಿಲ್ಲವಾದರೂ ಇದು ನಿಜ.

Vikram Rathour

ಆಸ್ಟ್ರೇಲಿಯಾದಲ್ಲಿ ಪ್ಯಾಟ್ ಕಮ್ಮಿನ್ಸ್, ಮತ್ತು ಮಿಚೆಲ್ ಸ್ಟಾರ್ಕ್ ಇದ್ದಾರೆ. ಇವರನ್ನು ಉದ್ದೇಶವಾಗಿಟ್ಟುಕೊಂಡು ಭಾರತ ತಂಡವು ನಿಧಾನಗತಿಯ ಪಿಚ್​ ನೀಡಲು ಬಯಸಿತ್ತು. ಕ್ಯುರೇಟರ್‌ಗಳು ತಮ್ಮದೇ ಆದ ಕೆಲಸವನ್ನು ಮಾಡುತ್ತಾರೆ ಮತ್ತು ಅವರ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂಬುದು ತಪ್ಪು. ನಾವು ಮನೆಯಲ್ಲಿ ಆಡುತ್ತಿದ್ದೆವು ಮತ್ತು ತುಸು ಹೆಚ್ಚಿಗೆ ಮಾಡಿದ್ದೆವು ಎಂದು ಕೈಫ್​ ಹೇಳಿದ್ದರು.

ಕೈಫ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟೀಮ್​ ಇಂಡಿಯಾ ಮಾಜಿ ಬ್ಯಾಟಿಂಗ್​ ಕೋಚ್, ಪಿಚ್​ಅನ್ನು ನಿಧಾನಗೊಳಿಸಲಾಗಿತ್ತು ಎಂಬ ಮಾತನ್ನು ನಾನು ಕೇಳಿದ್ದೇನೆ. ಆದರೆ, ಈ ಮಾತನ್ನು ನಾನು ಒಪ್ಪುವುದಿಲ್ಲ. ಹಿಂದಿನ ಪಂದ್ಯಗಳಲ್ಲಿಯೂ ನಾವು ಇದೇ ರೀತಿಯ ವಿಕೆಟ್‌ಗಳ ಮೇಲೆ ಆಡಿದ್ದೆವು. ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ನಿಧಾನಗತಿಯ ಪಿಚ್‌ಗಳಲ್ಲಿ ನಡೆದವು. ಆದರೆ, ಅಹಮದಾಬಾದ್​ ಪಿಚ್​ನಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net