ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕೋವಿಡ್​ ಆರ್ಭಟ; ಐವರು ವಾಟರ್​ ಪೋಲೋ ಆಟಗಾರ್ತಿಯರಲ್ಲಿ ಕಾಣಿಸಿಕೊಂಡ ಸೋಂಕು

Water Polo
Published on

ಪ್ಯಾರಿಸ್: ಸಿಟಿ ಆಫ್​ ಲವ್​ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್​ ಆತಿಥ್ಯದಲ್ಲಿ ಜುಲೈ 26ರಿಂದ ಒಲಿಂಪಿಕ್ಸ್​ ಕ್ರೀಡಾಕೂಟ ಆರಂಭವಾಗಲಿದ್ದು, 33ನೇ ಆವೃತ್ತಿಯ ಕ್ರೀಡಾಕೂಟವು ಒಂದಿಲ್ಲೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್​ನಲ್ಲಿ 206 ದೇಶಗಳ 14,250 ಕ್ರೀಡಾಪಟುಗಳು ಭಾಗಿಯಾಗುತ್ತಿದ್ದು, ಇದೀಗ ಆಸ್ಟ್ರೇಲಿಯಾ ಮೂಲದ ಐವರು ಆಟಗಾರ್ತಿಯರು ಕೋವಿಡ್​ಗೆ ತುತ್ತಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಆಸ್ಟ್ರೇಲಿಯಾದ ವಾಟರ್​ ಪೋಲೋ ತಂಡದ ಐವರು ಆಟಗಾರ್ತಿಯರು ಕೋವಿಡ್​ಗೆ ತುತ್ತಾಗಿದ್ದು, ಎಲ್ಲರನ್ನೂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಇವರನ್ನು ವಿಶೇಷವಾಗಿ ಆರೈಕೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಒಲಿಂಪಿಕ್ ತಂಡದ ಮುಖ್ಯಸ್ಥ ಅನ್ನಾ ಮೀರೆಸ್, ಒಟ್ಟು ಐವರು ಅಥ್ಲೀಟ್‌ಗಳು ಕೋವಿಡ್​ಗೆ ತುತ್ತಾಗಿದ್ದು, ಎಲ್ಲರಿಗೂ ಚಿಕಿತ್ಸೆ ಕೊಡಲಾಗುತ್ತಿದೆ. ಈಗಾಗಲೇ ಈ ಐವರು ಆಟಗಾರರು ಚೇತರಿಸಿಕೊಂಡಿದ್ದು, ತರಬೇತಿಯಲ್ಲಿ ಭಾಗಿಯಾಗಲಿದ್ದಾರೆ. ವಾಟರ್​ ಪೋಲೋ ತಂಡದಲ್ಲಿರುವ ಇತರೆ ಆಟಗಾರರಿಗೂ ಕೋವಿಡ್​ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net