ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ

New Project (2)
Published on

ಕಾಸರಗೋಡು: ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳ ಇಲಾಖೆ ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಸಭಾಂಗಣದಲ್ಲಿ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಆಯೋಜಿಸಿತ್ತು.

ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ ಜಿಲ್ಲಾಮಟ್ಟದ ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ಸರಬರಾಜು ಅಧಿಕಾರಿ ಕೆ.ಎನ್.ಬಿಂದು ಅಧ್ಯಕ್ಷತೆ ವಹಿಸಿದ್ದರು. ಕೌನ್ಸಿಲರ್ ವಂದನಾ ಬಾಲರಾಜ್, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸಹಾಯಕ, ರಿಜಿಸ್ಟ್ರಾರ್ ಎಂ.ಜಯಪ್ರಕಾಶ್, ಜಿಲ್ಲಾ ಗ್ರಾಹಕ ಸಮಿತಿ ಸದಸ್ಯ ಚಂದ್ರನ್ ಅರಂಗಡಿ ಮತ್ತಿತರರು ಮಾತನಾಡಿದರು.

ಗ್ರಾಹಕರ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾದ ಸುಸ್ಥಿರ ಜೀವನ ಶೈಲಿಗೆ ಸರಿಯಾದ ಪರಿವರ್ತನೆ ಎಂಬ ವಿಷಯದ ಕುರಿತು ವಕೀಲ ರಮಾದೇವಿ ವಿಷಯ ಮಂಡಿಸಿದರು. ತಾಲೂಕು ಸರಬರಾಜು ಅಧಿಕಾರಿ ಜಿ.ಮಾಧವನ್ ಪೋತ್ತಿ ಸ್ವಾಗತಿಸಿದರು. ತಾಲೂಕು ಸರಬರಾಜು ಅಧಿಕಾರಿ ರಾಜೇಶ್ ಮಕ್ಕನಾಯ್ ವಂದಿಸಿದರು.

ಎಲ್.ಪಿ., ಯು.ಪಿ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಗ್ರಾಹಕರ ಹಕ್ಕುಗಳಿಗೆ ಸಂಬಂಧಿಸಿದ ಪೋಸ್ಟರ್ ಬರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಯುಪಿ ವಿಭಾಗದಲ್ಲಿ ಪ್ರಥಮ ಸಾರಂಗಿ ಸರಸ್ವತಿ(ಎಸಿ ಕೆಎನ್‌ಎಸ್ ಜಿಯುಪಿಎಸ್ ಮೇಲಂಕೋಟ್), ದ್ವಿತೀಯ ದೇವ ಸೂರ್ಯ ಎ.ವಿ.(ಮೇಲಂಕೋಟ್ ಶಾಲೆ), ಎಲ್‌ಪಿ ವಿಭಾಗದಲ್ಲಿ ಪ್ರಥಮ ಸ್ಥಾನ ದೇವಯಾನಿ ಪಿ.(ಯು.ಬಿ.ಎಂ.ಸಿ. ಶಾಲೆ, ಹೊಸದುರ್ಗ), ಎರಡನೇ ಸ್ಥಾನ ವೈದೇವ್ ಚಂದ್ರನ್(ಯು.ಬಿ.ಎಂ.ಸಿ. ಶಾಲೆ) ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net