ಬಂಟ್ವಾಳಕ್ಕೆ ವರ್ಲ್ಡ್ ಬ್ಯಾಂಕ್ ಅಧ್ಯಯನ ತಂಡ

Published on

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಇದರ ಬಂಟ್ವಾಳ ಯೋಜನಾ ವ್ಯಾಪ್ತಿಯಲ್ಲಿ ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಅಭಿವೃಧ್ಧಿಗಾಗಿ ಸ್ವ-ಸಹಾಯ ಸಂಘಗಳ ಮುಖಾಂತರ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳ ಹಾಗೂ ಸಿಡ್ಬಿ ಸಾಲ ಪಡೆದುಕೊಂಡು ಸ್ವ ಉದ್ಯೋಗ ಮಾಡಿಕೊಂಡಿರುವ ಸದಸ್ಯರ ಸ್ಥಿತಿಗತಿ ಅಧ್ಯಯನ ಮಾಡಲು ವರ್ಲ್ಡ್ ಬ್ಯಾಂಕ್‌ನ ಅಮಿತ್ ಅರೋರ ಜಿ, ಗೇಟ್ಸ್ ಫೌಂಡೇಷನ್‌ನ ಅಂಜಿನಿ ಕುಮಾರ್ ಜಿ, ಸಾಧನ್‌ನ ನೀರಜ್ ಪೋಕ್ರಿಯಲ್ ಭೇಟಿ ನೀಡಿದರು.

ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಯೋಜನಾಧಿಕಾರಿ ಜಯಾನಂದ ಪಿ, ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿ ಪ್ರೇಮನಾಥ್ ಎಚ್, ಕರಾವಳಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಸುಪ್ರೀತ್ ಕುಮಾರ್ ಜೈನ್, ಸಂವಹನ ಯೋಜನಾಧಿಕಾರಿ ಅಜಿತ್ ಹೆಗ್ಡೆ, ವಲಯ ಮೇಲ್ವಿಚಾರಕಿ ವೇದಾವತಿ, ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು ಹಾಜರಿದ್ದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net