

ಬೆಳ್ತಂಗಡಿ: ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಸುಸಜ್ಜಿತ ’ಆಶಾ ಕಿರಣ’ ವಾಣಿಜ್ಯ ಸಂಕೀರ್ಣ ಜ.23ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಆಡಳಿತ ಮಂಡಳಿ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸಲಿದ್ದು, ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರು ವಾಲ್ಟರ್ ಡಿ ಮೆಲ್ಲೊ ಆಶೀರ್ವಚನ ನೀಡಲಿದ್ದಾರೆ. ಶಾಸಕ ಹರೀಶ್ ಪೂಂಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ. ರಘು, ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಆಲ್ ಇಂಡಿಯಾ ಕೆಥೊಲಿಕ್ ಯೂನಿಯನ್ ಕರ್ನಾಟಕ ರೀಜನ್ ನಿಕಟಪೂರ್ವ ಅಧ್ಯಕ್ಷ ಸೇವಿಯರ್ ಪಾಲೇಲಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಳ್ತಂಗಡಿ ಕೆಥೊಲಿಕ್ ಕ್ರೆಡಿಟ್ ಸಹಕಾರ ಸಂಘ 604 ಸದಸ್ಯರನ್ನು ಒಳಗೊಂಡು 6 ಲಕ್ಷ ರೂ. ಪಾಲು ಬಂಡವಾಳದೊಂದಿಗೆ 1998 ಜನವರಿ 26ರಂದು ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜರ ಆಶೀರ್ವಚನದೊಂದಿಗೆ ಸ್ಥಾಪನೆಗೊಂಡಿತು. ಅಂದಿನ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಿದ್ದರು. ಅನೇಕ ರೀತಿಯ ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಠೇವಣಿದಾರರಿಗೆ ಆಕರ್ಷಕ ಬಡ್ಡಿಯನ್ನು ನೀಡುತ್ತಿದೆ. ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಪ್ರಸ್ತುತ 2700 ಸದಸ್ಯರನ್ನು ಒಳಗೊಂಡು 93 ಲಕ್ಷ ರೂ. ಪಾಲು ಬಂಡವಾಳ , 95 ಕೋಟಿ ರೂ.ಠೇವಣಿ ಸಂಗ್ರಹಿಸಿ, ಅನೇಕ ನಿಧಿಗಳನ್ನು ಸ್ಥಾಪಿಸಿ 100 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಒಟ್ಟು ಸಾಲ 80 ಕೋಟಿ ರೂ. ಹೊರಬಾಕಿ ಇರುತ್ತದೆ. ಕಳೆದ ಸಾಲಿನಲ್ಲಿ ಸುಮಾರು 3 ಕೋಟಿ ಲಾಭ ಗಳಿಸಿದೆ.
ಆಡಳಿತ ಮಂಡಳಿ ಅಧ್ಯಕ್ಷ ಹೆನ್ರಿ ಲೋಬೊ, ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ, ನಿರ್ದೇಶಕರಾದ ಜೇಮ್ಸ್ ಡಿ ಸೋಜ, ಹೆರಾಲ್ಡ್ ಪಿಂಟೊ, ಜೋಸೆಫ್ ಪೀಟರ್ ಸಲ್ಡಾನ್ಹಾ, ಆಲ್ಫೋನ್ಸ್ ರೊಡ್ರೀಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೊ, ಥೋಮಸ್ ಆರ್.ನೊರೊನ್ಹಾ, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಪೌಲಿನ್ ರೇಗೊ, ಪ್ಲೇವಿಯ ಪಾವ್ಲ್, ವಿನಯ್ ಜೋನ್ಸನ್ ಡಿ ಸೋಜ, ರಿಯೋ ಮೈಕಲ್ ರೊಡ್ರಿಗಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಐವನ್ ಗೊನ್ಸಾಲ್ವಿಸ್ ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ಸೇವೆ ನೀಡುತ್ತಿದ್ದಾರೆ.