ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹಾಗೂ ಪ್ರೌಢಶಾಲೆಯ ಆಶ್ರಯದಲ್ಲಿ, ಜೈ ತುಳುನಾಡ್ ಕಾಸರಗೋಡು ವಲಯ ಸಮಿತಿಯ ವತಿಯಿಂದ ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತುಳು ಲಿಪಿ ಕಲಿತು ಪರೀಕ್ಷೆ ಬರೆದರು. ಸೋಮವಾರ ಪರೀಕ್ಷೆಯಲ್ಲಿ ಉತ್ತಿರ್ಣರಾದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕಾಸರಗೋಡಿನ ಶಾಲೆಯಲ್ಲಿ ತುಳು ಲಿಪಿಯನ್ನು ಪ್ರಥಮವಾಗಿ ಕಲಿಸಿದ ಹೆಗ್ಗಳಿಕೆ ಮಹಾಜನ ಸಂಸ್ಕೃತ ಕಾಲೇಜಿಗೆ ಸಲ್ಲುತ್ತದೆ ಎಂದು ಶಾಲೆಯ ರಕ್ಷಕ–ಶಿಕ್ಷಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕೆದಿಲಾಯ ಹೇಳಿದರು. ತುಳು ಲಿಪಿ ಶಿಕ್ಷಕಿ, ಜೈ ತುಳುನಾಡ್ ಸಂಘಟನೆಯ ಉಪಾಧ್ಯಕ್ಷೆ ವಿನೋದ್ ಪ್ರಸಾದ್ ರೈ, ಕಾಸರಗೋಡು ವಲಯ ಸಮಿತಿಯ ಸದಸ್ಯರು ಹಾಗೂ ತುಳು ಲಿಪಿ ಬ್ರಹ್ಮನೆಂದು ಖ್ಯಾತಿ ಪಡೆದ ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಅವರ ಪುತ್ರ ವಿಜಯರಾಜ ಪುಣಿಂಚತ್ತಾಯ, ಶಿಕ್ಷಕಿ ಶೈಲಜಾ ಉಪಸ್ಥಿತರಿದ್ದರು.