ಯಾಂತ್ರಿಕ ಬದುಕು ಸಮಾಜಕ್ಕೆ ಮಾರಕ : ಆಪ್ತಸಮಾಲೋಚಕಿ ಶ್ವೇತಾ ಅನಿಸಿಕೆ

gida
ಪೌಷ್ಟಿಕ ಆಹಾರಗಳ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Published on

ಕಡಬ: ನಿತ್ಯಜೀವನದಲ್ಲಿ ಮನುಷ್ಯನು ದುಡಿಮೆ ಹಾಗೂ ಸಂಪಾದನೆಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾಂತ್ರಿಕ ಬದುಕಿನಿಂದಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಕಡಿಮೆಯಾಗಿದೆ. ಇದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾರಕ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಶ್ವೇತಾ ಹೇಳಿದರು.

ಕಡಬ ತಾಲೂಕು ಮೂರಾಜೆ ಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ದೊಡ್ಡಕೊಪ್ಪ ಜ್ಞಾನದೀಪಾ ಜ್ಞಾನವಿಕಾಸ ಕೇಂದ್ರದ ವತಿಯಿಂದ ನಡೆದ ಪೌಷ್ಟಿಕ ಆಹಾರಗಳ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕಡಬ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ, ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿದರು. ಶ್ರೀ ವಿನಾಯಕ ಸಂಘದ ವಸಂತಿ ಅಧ್ಯಕ್ಷತೆ ವಹಿಸಿದ್ದರು. ಸೇವಾಪ್ರತಿನಿಧಿ ಸರಿತಾ ಉಪಸ್ಥಿತರಿದ್ದರು. ಸದಸ್ಶರಿಂದ ತಯಾರಿಸಲಾದ ಹದಿನೇಳು ಬಗೆಯ ಪೌಷ್ಟಿಕ ಖಾದ್ಯಗಳ ಪ್ರದರ್ಶನ ಹಾಗೂ ತಯಾರಿಸುವ ವಿಧಾನಗಳ ಕುರಿತು ಕಾರ್ಯಾಗಾರ ನಡೆದು ಬಳಿಕ ಬಹುಮಾನ ವಿತರಿಸಲಾಯಿತು.

ಕೇಂದ್ರದ ಸದಸ್ಯೆ ಮೀನಾಕ್ಷಿ ಎಂ.ಎಸ್. ಸ್ವಾಗತಿಸಿದರು. ಲತಾ. ಕೆ ವಂದಿಸಿದರು. ಕೇಂದ್ರದ ಸಂಯೋಜಕಿ ಬೆಂದಿನಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net