ಕಾಸರಗೋಡು: ಚೆರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆಯ ಮೇಲ್ಸೇತುವೆಯಿಂದ ಬಿದ್ದು ಅಸ್ಸಾಂ ಮೂಲದ ಕಾರ್ಮಿಕ ರಬೀಬುಲ್ ಹಕ್(27) ಎಂಬುವರು ಮಂಗಳವಾರ ಮೃತಪಟ್ಟಿದ್ದಾರೆ. ಷಟ್ಪಥ ಕಾಮಗಾರರಿ ನಡೆಯುತ್ತಿದ್ದು, ಅದರ ಮೇಲ್ಸೇತುವೆಗೆ ಕಬ್ಬಿಣದ ಸಲಾಕೆ ಕಟ್ಟುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಐದು ತಿಂಗಳ ಹಿಂದೆಯಷ್ಟೇ ಹೆದ್ದಾರಿ ಕಾಮಗಾರಿಗಾಗಿ ರಬೀಬುಲ್ ಚೆರ್ಕಳಕ್ಕೆ ಆಗಮಿಸಿದ್ದರು.