ವಿದ್ಯುತ್ ಲೈನ್‌ಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

Death Case
Published on

ಸಿದ್ದಾಪುರ: ಉಳ್ಳೂರು-74 ಗ್ರಾಮದ ಅಬ್ಬಿಬೇರು ಎಂಬಲ್ಲಿ ಬಿಜು ಅಗಸ್ಟಿನ್ ಎಂಬುವರ ಅಡಕೆ ತೋಟದಲ್ಲಿ ಅಡಕೆ ಫಸಲು ಕೊಯ್ಲುತ್ತಿರುವಾಗ ಅಲ್ಯೂಮಿನಿಯಂ ಕೊಕ್ಕೆ ವಿದ್ಯುತ್ ತಂತಿಗೆ ತಾಗಿ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ ಲುಪುಂಗ ಗ್ರಾಮದ ರಾಮ್ ಕಿಶನ್ ಓರಾನ್(34) ಎಂಬುವರು ಸೋಮವಾರ ಮೃತಪಟ್ಟಿದ್ದಾರೆ. ಕೊಕ್ಕೆ ವಿದ್ಯುತ್ ತಂತಿಗೆ ತಾಗಿ ನೆಲಕ್ಕೆ ಬಿದ್ದ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net