ಸಂಬಳ ಹೆಚ್ಚಿಸುತ್ತಿಲ್ಲ, ಮನೆ ಸಂಭಾಳಿಸಲು ಆಗುತ್ತಿಲ್ಲ ಎಂದು ಕಾರ್ಮಿಕ ಆತ್ಮಹತ್ಯೆ

shivaraj
Published on

ಬೆಂಗಳೂರು : ಕೆಲಸದಲ್ಲಿನ ಒತ್ತಡದಿಂದ ಮತ್ತು ಸಂಬಳ ಹೆಚ್ಚು ಮಾಡಿಲ್ಲ ಅಂತ ಮನನೊಂದು ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ, ಕಾರ್ಖಾನೆಯ ಆಡಳಿತದವರೇ ತನ್ನ ಸಾವಿಗೆ ಕಾರಣ ಎಂದು ಡೆತ್​ನೋಟ್ ಬರೆದಿಟ್ಟಿದ್ದಾನೆ.

ದಾವಣಗೆರೆ ಮೂಲದ 28 ವರ್ಷದ ಶಿವರಾಜ, ಮೃತ ಕಾರ್ಮಿಕ. ಬೆಂಗಳೂರು ಉತ್ತರ ತಾಲೂಕಿನ ಅದ್ದಿಗಾನಹಳ್ಳಿಯ ಮನೆಯಲ್ಲೇ ನೇಣುಬಿಗಿದುಕೊಂಡಿದ್ದಾನೆ.

ತನ್ನ ನಿಜವಾದ ಸಂಬಳ ಕೇವಲ 18,000 ರೂ.ಗಳಾಗಿದ್ದು, ಅದರಲ್ಲಿ ಮನೆ ಸಂಭಾಳಿಸಲು ಸಾಧ್ಯವಾಗುತ್ತಿಲ್ಲ. ಸಂಬಳ ಹೆಚ್ಚಿಸಿ ಎಂಬ ಬೇಡಿಕೆಯನ್ನು ಕಾರ್ಖಾನೆಯವರು ಈಡೇರಿಸುತ್ತಿಲ್ಲ. ಜೊತೆಗೆ ಕೆಲವು ಹಿರಿಯ ಅಧಿಕಾರಿಗಳು ನೋವು ಕೊಡುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾನೆ.

ಕಂಪನಿಯಲ್ಲಿ ಸಿಗುವ ಇನ್ಷೂರೆನ್ಸ್​ ಹಣವನ್ನು ತನ್ನ ಮನೆಯವರಿಗೆ ನೀಡಿ. ಅಡ ಇಟ್ಟಿರುವ ತನ್ನ ತಾಯಿ ಮತ್ತು ಅಕ್ಕನ ಒಡವೆಯನ್ನು ಯಾರಾದರೂ ಬಿಡಿಸಿಕೊಡಿ ಎಂದು ಕೇಳಿಕೊಂಡಿದ್ದಾನೆ. ಸಾಯುತ್ತಿರುವುದಕ್ಕೆ ಮನೆಯವರಿಗೆಲ್ಲ ಸಾರಿ ಕೇಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net