'ಮರದ ಕತ್ತಿ ಕೊಟ್ಟು ಯುದ್ಧಕ್ಕೆ ಹೋಗು' ಎಂಬಂತಾಗಿದೆ ಖರ್ಗೆ ಸ್ಥಿತಿ: ಸಂಸದರ ವ್ಯಂಗ್ಯ

Srinivas Prasad New
Published on

ಚಾಮರಾಜನಗರ: 'ಏನಿದೆ ಎಐಸಿಸಿನಲ್ಲೀ, ಖರ್ಗೆಗೆ ಏನ್​​​ ಕೊಟ್ಟಿದ್ದಾರೆ ಪಾಪ? ಮರದ ಕತ್ತಿ ಕೊಟ್ಟಿದ್ದಾರೆ, ಮರದ ಕತ್ತಿ ಕೊಟ್ಟು ಯುದ್ಧಕ್ಕೆ ಹೋಗು ಅಂದಿದ್ದಾರೆ..' ಎಂದು ಸಂಸದ ಶ್ರೀನಿವಾಸ್​​ ಪ್ರಸಾದ್​​ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​​​ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವ್ಯಂಗ್ಯವಾಡಿದ ಸಂಸದ, ನಂತರ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡರು. 'ಐದು ವರ್ಷ ಮುಖ್ಯಮಂತ್ರಿ ಆಗಿದ್ದವರಿಗೆ ಇಂಥ ಕಡೆ ಚುನಾವಣೆಗೆ ನಿಲ್ತೀನಿ ಅಂತ ಹೇಳೋ ಧೈರ್ಯಾನೇ ಇಲ್ವಲ್ಲಾ...?' ಎಂದು ಸಿದ್ದರಾಮಯ್ಯ ತಮ್ಮ ಚುನಾವಣಾ ಕ್ಷೇತ್ರವನ್ನು ಇನ್ನೂ ಆಯ್ಕೆ ಮಾಡಿರದಿದ್ದುದಕ್ಕೆ, ಅವರನ್ನೂ ಮೂದಲಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾದಾಮಿಗೆ ಹೋದ ಸಿದ್ದರಾಮಯ್ಯ ಎಂದು ಏಕವಚನದಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್​​​​, ಸಿದ್ದರಾಮಯ್ಯ ತಮ್ಮ ಕ್ಷೇತ್ರ ಆಯ್ಕೆಯ ಬಗ್ಗೆ ಧೈರ್ಯವಾಗಿ ಹೇಳಲಿ ಎಂದು ಪಟ್ಟು ಹಿಡಿದರು.

'ಸಿದ್ದರಾಮಯ್ಯ ಒಬ್ಬ ಅಂಜುಬುರುಕ, ರಾಜಕೀಯ ಅಲೆಮಾರಿ..' ಎಂದು ಶ್ರೀನಿವಾಸ್ ಪ್ರಸಾದ್​​​​​ ಕಿಡಿಕಾರಿದರು. ರಾಯಚೂರಿನಲ್ಲಿ ಮೋದಿ ಕುರಿತಂತೆ ಸಿದ್ದರಾಮಯ್ಯ ಮಾತನಾಡಿದ್ದನ್ನು ನೆನಪಿಸಿಕೊಂಡು, 'ಟೇಬಲ್ ಕುಟ್ಟಿ ಹೇಳಿದ್ರು, ಮೋದಿ ಪ್ರಧಾನಿ ಆಗಲ್ಲಾ ಅಂತ... ಈಗ ಏನಾಗಿದೆ...?' ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net