More

    ಜಿ-20 ಸಭೆ ಇಂಡೊನೇಷ್ಯಾದಲ್ಲಿ, ಲಾಭ ಹಿಮಾಚಲದಲ್ಲಿ; ಚುನಾವಣೆ ಹತ್ತಿರದಲ್ಲಿರುವಾಗ ಮೋದಿ ಮಾಡಿದ್ರಾ ಮ್ಕ್ಯಾಜಿಕ್​​?!

    ನವದೆಹಲಿ: ಮುಂದಿನ ವಾರ ಇಂಡೊನೇಷ್ಯಾದಲ್ಲಿ ಜಿ-20 ಸಭೇ ನಡೆಯಲಿದ್ದು ಪ್ರಧಾನಿ ಮೋದಿ ಅದನ್ನು ಹಿಮಾಚಲ ಪ್ರದೇಶದ ಚುನಾವಣೆಗೆ ಬಳಸಿಕೊಳ್ಳಲಿದ್ದಾರೆ.

    ಇಂಡೊನೇಷ್ಯಾಗೂ ಹಿಮಾಚಲ ಪ್ರದೇಶದ ಚುನಾವಣೆಗೂ ಯಾವ ಸಂಬಂಧ ಎಂದು ಕೇಳಬಹುದು. ಸಂಬಂಧ ಇದೆ. ಮುಂದಿನ ವಾರ ನಡೆಯುವ ಜಿ-20 ಸಭೆಯಲ್ಲಿ ಜಗತ್ತಿನ ನಾಯಕರು ಸೇರಲಿದ್ದಾರೆ. ಆಗ ಭಾರತದ ಸಂಸ್ಕೃತಿಯನ್ನು ಸಾರುವ ವಸ್ತುಗಳನ್ನು ಮೋದಿ, ವಿವಿಧ ದೇಶಗಳ ನಾಯಕರಿಗೆ ಗಿಫ್ಟ್​ ಕೊಡಲಿದ್ದಾರೆ. ತರಹೇವಾರಿ ಶಾಲುಗಳು, ಜಾನಪದ ಪೇಂಟಿಂಗ್​ಗಳು, ಹಿತ್ತಾಳೆಯಿಂದ ಮಾಡಲ್ಪಟ್ಟ ಕಲಾಕೃತಿ ಹೀಗೆ ಅನೇಕ ವಸ್ತುಗಳನ್ನು ಮೋದಿ ನೀಡಲಿದ್ದಾರೆ.

    ಮಜಾ ಇರೋದು ಇಲ್ಲೇ. ಈ ಎಲ್ಲಾ ವಸ್ತುಗಳನ್ನು ಮಾಡಿದವರು ಹಿಮಾಚಲ ಪ್ರದೇಶದ ಪಾರಂಪರಿಕ ಕಲಾವಿದರು. ಹಿಮಾಚಲ ಪ್ರದೇಶದ ಚುನಾವಣೆ ಹತ್ತಿರದಲ್ಲೇ ಇರುವಾಗ ಈ ನಡೆ ಇಟ್ಟಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಈ ನಡೆ ಹಿಮಾಚಲ ಪ್ರದೇಶದ ಜನರ ಮನಸ್ಸನ್ನು ತಟ್ಟುತ್ತಾ? ಬಿಜೆಪಿಯನ್ನು ಗೆಲ್ಲಿಸುತ್ತಾ? ಈ ಪ್ರಶ್ನೆಗಳಿಗೆ ಉತ್ತರವನ್ನು ಚುನಾವಣಾ ಫಲಿತಾಂಶವೇ ಹೇಳಬೇಕು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts