

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 24ಗಿ7, ಸಿಪಿಸಿ ಕಂಪನಿ ಸಹಯೋಗದೊಂದಿಗೆ ಜನರಿಗೆ ಸಕ್ಸೀಡ್ ಇ- ಲರ್ನಿಂಗ್ ಆ್ಯಪ್ ತಲುಪಿಸಲು ಆರಂಭಿಸಿರುವ ‘ವಿದ್ಯಾಭಿಯಾನ’ಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಅಭಿಯಾನ ಆರಂಭವಾದ ನಾಲ್ಕೇ ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ, ಆ್ಯಪ್ನಲ್ಲಿರುವ ಪಠ್ಯಕ್ರಮದ ಅಂಶಗಳನ್ನು ನೋಡಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಯಾನಕ್ಕೆ ಮೆಚ್ಚುಗೆ ಸೂಚಿಸಿ, ಹೆಚ್ಚು ವಿದ್ಯಾರ್ಥಿಗಳು ಇದರ ಸುದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ವಿವಿಧ ಸಚಿವರು, ಶಾಸಕರು, ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಆ್ಯಪ್ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಲು ಅಭಿಯಾನ ಉತ್ತಮವಾದ ಕಾರ್ಯ ಎಂದು ಶುಭ ಹಾರೈಸಿದ್ದಾರೆ. ವಿದ್ಯಾಭಿಯಾನ ರಾಜ್ಯದ ಮೂಲೆ ಮೂಲೆಯಲ್ಲಿರುವ ಪಾಲಕರು, ವಿದ್ಯಾರ್ಥಿಗಳನ್ನು ತಲುಪುತ್ತಿದ್ದು, ವಿದ್ಯಾರ್ಥಿಗಳಿಗೆ ಆಪ್ನಲ್ಲಿರುವ ಉಪಯೋಗದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 98440 99258 ಸಂರ್ಪಸಬಹುದು.
ಬೆರಳ ತುದಿಯಲ್ಲೇ ಪಠ್ಯಕ್ರಮದ ಸಂಪೂರ್ಣ ಮಾಹಿತಿ ನೀಡುತ್ತಿರುವುದಕ್ಕೆ ಪತ್ರಿಕೆ, ನ್ಯೂಸ್ ಚಾನಲ್ಗೆ ಧನ್ಯವಾದ. ಆಂದೋಲನ ಯಶಸ್ವಿಯಾಗಲಿ.
| ಎಸ್.ಸುರೇಶ್ ಕುಮಾರ್ ಶಿಕ್ಷಣ ಸಚಿವ
ವಿದ್ಯಾರ್ಥಿಗಳಿಗೆ ಸ್ಮಾಟ್ ಆಗಿ ಶಿಕ್ಷಣ ನೀಡುವ ಉದ್ದೇಶದಿಂದ ಇಡೀ ಪಠ್ಯಕ್ರಮವನ್ನು ಆ್ಯಪ್ನಲ್ಲಿ ಲೋಡ್ ಮಾಡಿದೆ. ವಿಜಯವಾಣಿ ಮತ್ತು ದಿಗ್ವಿಜಯ 24ಗಿ7 ನ್ಯೂಸ್ ಕಾರ್ಯ ಶ್ಲಾಘನೀಯ.
| ವೈ.ಎಸ್.ವಿ.ದತ್ತ ಮಾಜಿ ಶಾಸಕ
ಕರೊನಾ ವೇಳೆ ಕಲಿಕೆಯಿಂದ ಮಕ್ಕಳು ದೂರ ಉಳಿಯಬಾರದು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಿರುವುದು ಹೆಚ್ಚು ಸೂಕ್ತವಾಗಿದೆ. ಇದೊಂದು ವಿಶೇಷವಾದ ಕಾರ್ಯಕ್ರಮ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಿದೆ.
| ಕೆ.ಗೋಪಾಲಯ್ಯ ಆಹಾರ ಸಚಿವ