

ಮುಂಬೈ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2025ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಉಪನಾಯಕಿ ಸ್ಮೃತಿ ಮಂಧಾನ(Smriti Mandhana), ಮಾಜಿ ನಾಯಕಿ ಮಿಥಾಲಿ ರಾಜ್ ಪ್ರಮುಖ ದಾಖಲೆಯನ್ನು ಮುರಿದಿದ್ದಾರೆ.
2025ರ ವಿಶ್ವಕಪ್ ಋತುವಿನಲ್ಲಿ ಮಂಧಾನಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತ ತಂಡ ಫೈನಲ್‌ಗೆ ಪ್ರವೇಶಿಸಿರುವ ಮಂಧಾನ ನ್ಯೂಜಿಲೆಂಡ್ ವಿರುದ್ಧ ಶತಕದೊಂದಿಗೆ 389 ರನ್ ಗಳಿಸಿದ್ದರು. ಅದರೆ, ಫೈನಲ್‌ನಲ್ಲಿ ಉತ್ತಮ ಆರಂಭ ಪಡೆದ ನಂತರ, ಮಂಧಾನಾ, ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ಗಳಿಸಿದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ದಾಖಲೆಯನ್ನು ಮುರಿದಿದ್ದಾರೆ.
ಅಲ್ಲದೆ, ಈ ದಾಖಲೆಯನ್ನು ಫೈನಲ್ ಪಂದ್ಯದಲ್ಲಿ 21 ರನ್ಗಳಿಸುವ ಮೂಲಕ ಮಂಧಾನ ಮಾಜಿ ನಾಯಕಿ ರಾಜ್ ಉಡೀಸ್ ಮಾಡಿದ್ದಾರೆ. 2017 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಮಿಥಾಲಿ 409 ರನ್ಗಳಿಸಿದ್ದರು.
1 - ಸ್ಮೃತಿ ಮಂಧಾನ: 2025 ರಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 410 ರನ್‌ಗಳು*
2 - ಮಿಥಾಲಿ ರಾಜ್: 2017 ರಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 409 ರನ್‌ಗಳು
3 - ಪುನಮ್ ರಾವುತ್: 2017 ರಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 381 ರನ್‌ಗಳು
4 - ಹರ್ಮನ್ಪ್ರೀತ್ ಕೌರ್ : 2017 ರಲ್ಲಿ ಎಂಟು ಇನ್ನಿಂಗ್ಸ್ ಗಳಲ್ಲಿ 359 ರನ್‌ಗಳು
5 - ಸ್ಮೃತಿ ಮಂಧಾನ: 2022 ರಲ್ಲಿ ಏಳು ಇನ್ನಿಂಗ್ಸ್‌ಗಳಲ್ಲಿ 327 ರನ್‌ಗಳು
ನೆವಿ ಮುಂಬೈನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಹರಿಣಗಳ ವಿರುದ್ಧ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ 20 ರನ್ ಮತ್ತು ದೀಪ್ತಿ ಶರ್ಮ 33 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಭಾರತ ತಂಡವು 3 ವಿಕೆಟ್ ಕಳೆದುಕೊಂಡು 222 ರನ್ಗಳಿಸಿದೆ. (ಏಜೆನ್ಸೀಸ್)