ಮಹಿಳಾ ವಿಶ್ವಕಪ್​ ಫೈನಲ್​: ಸ್ಮೃತಿ, ಶೆಫಾಲಿ ಉತ್ತಮ ಆರಂಭ! 25 ಓವರ್​ ಅಂತ್ಯಕ್ಕೆ 150ರ ಗಡಿದಾಟಿದ ಭಾರತ | IND vs SA Final

ಮಹಿಳಾ ವಿಶ್ವಕಪ್​ ಫೈನಲ್​: ಸ್ಮೃತಿ, ಶೆಫಾಲಿ ಉತ್ತಮ ಆರಂಭ! 25 ಓವರ್​ ಅಂತ್ಯಕ್ಕೆ 150ರ ಗಡಿದಾಟಿದ ಭಾರತ | IND vs SA Final
Published on

IND vs SA Final: ಇಂದು ನವಿ ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ಉತ್ತಮ ಆರಂಭವನ್ನೇ ಪಡೆದಿದೆ.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹರಿಣರು, ಹರ್ಮನ್​ಪ್ರೀತ್ ಕೌರ್​ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಕ್ರೀಸ್​ಗಿಳಿದ ಆರಂಭಿಕ ಬ್ಯಾಟರ್​ಗಳಾದ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಜೋಡಿ ಉತ್ತಮ ಆರಂಭವನ್ನೇ ನೀಡಿದೆ. ಇಬ್ಬರ ಜತೆಯಾಟದಿಂದ ಮೊದಲ 25 ಓವರ್​ನಲ್ಲಿ ಭಾರತ 150 ರನ್​ಗಳ ಗಡಿದಾಟಿತು.

ಸ್ಮೃತಿ ಮತ್ತು ಶೆಫಾಲಿ ವಿಶ್ವಕಪ್​ ಗೆಲ್ಲಲೇಬೇಕು ಎಂಬ ಹಠದಲ್ಲಿ ಕಣಕ್ಕಿಳಿದರು ಎಂಬುದಕ್ಕೆ ಅವರಿಬ್ಬರ ಆರಂಭಿಕ ಕೊಡುಗೆಯೇ ಸಾಕ್ಷಿ. ಸ್ಮೃತಿ (58 ಎಸೆತಕ್ಕೆ 45 ರನ್​) ಮತ್ತು ಶೆಫಾಲಿ (78 ಎಸೆತ, 87 ರನ್​) ಉತ್ತಮ ಆರಂಭಿಕ ಇನ್ನಿಂಗ್ಸ್ ನೀಡಿ ಔಟಾದರು. ಅವರ ನಂತರ ಕ್ರೀಸ್​ಗೆ ಇಳಿದ ಶತಕ ರಾಣಿ ಜೆಮಿಮಾ ರೊಡ್ರಿಗಸ್ ಇಂದಿನ ಪಂದ್ಯದಲ್ಲಿ ಖಂಡಿತ ಶತಕದಾಟ ತೋರುತ್ತಾರೆ ಎಂದೇ​ ಕ್ರಿಕೆಟ್​ ಪ್ರೇಮಿಗಳು ಆಶಿಸಿದ್ದರು. ಆದರೆ, ಅದು ವಿಫಲವಾಯಿತು.

ಕೇವಲ 24 ರನ್​ಗೆ ಔಟ್​ ಆಗಿ ಜೆಮಿಮಾ ಪೆವಿಲಿಯನ್​ ಹಾದಿ ಹಿಡಿದರು. ನಾಯಕಿ ಹರ್ಮನ್​ಪ್ರೀತ್ ಕೌರ್​ ಕ್ರೀಸ್​ನಲ್ಲಿ ಉಳಿದಿದ್ದು, ಅವರೊಂದಿಗೆ ದೀಪ್ತಿ ಶರ್ಮ ತಂಡದ ಒಟ್ಟು ಮೊತ್ತವನ್ನು ಹೆಚ್ಚಿಸುವಲ್ಲಿ ತೊಡಗಿದ್ದಾರೆ. ಪ್ರಸ್ತುತ ಸ್ಕೋರ್​ ನೋಡುವುದಾದರೆ, ಭಾರತ 30.4 ಓವರ್​ಗೆ 3 ವಿಕೆಟ್​ ನಷ್ಟಕ್ಕೆ 173 ರನ್​ ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net