ಮಹಿಳಾ ಹಕ್ಕು-ಮಕ್ಕಳ ಗ್ರಾಮಸಭೆ

Gur_Neerumarga
Published on

ಗುರುಪುರ: ನೀರುಮಾರ್ಗ ಗ್ರಾ.ಪಂ.ನಲ್ಲಿ ಮಂಗಳವಾರ ಮಕ್ಕಳ ಹಕ್ಕು ಅಭಿಯಾನ ಗ್ರಾಮ ಸಭೆ ಮತ್ತು ಮಹಿಳಾ ಹಕ್ಕು ವಿಶೇಷ ಗ್ರಾಮ ಸಭೆ ನಡೆಯಿತು.

ಸಂಪನ್ಮೂಲ ವ್ಯಕ್ತಿ ನಂದಾ ಪೈಸ್ ಮಹಿಳಾ ಹಕ್ಕುಗಳ ಕುರಿತು ಮಾಹಿತಿ ನೀಡಿದರೆ, ಮಹಿಳಾ ಹಕ್ಕಿನ ಬಗ್ಗೆ ಮಂಗಳೂರು (ವಾಮಂಜೂರು) ಗ್ರಾಮಾಂತರ ಪೊಲೀಸ್ ಠಾಣೆ ಉಪ-ನಿರೀಕ್ಷಕ ರವಳೇಂದ್ರ ಕಾನೂನು ಮಾಹಿತಿ ನೀಡಿದರು.

ಗ್ರಾ.ಪಂ. ಅಧ್ಯಕ್ಷ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಮೊದಲಾದವದ್ದರು.

ನೀರುಮಾರ್ಗ ಗ್ರಾ.ಪಂ. ಕಾರ್ಯದರ್ಶಿ ಶಾಲಿನಿ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net