ಶಿಕ್ಷಕರಿಂದ ದೈಹಿಕ ಕ್ಷಮತೆ ಅರಿವು: ನಿರ್ದೇಶಕಿ ಪ್ರವೀಣಾ ರೈ ಕಿವಿಮಾತು

Ull_HaleKote
Published on

ಉಳ್ಳಾಲ: ಮಕ್ಕಳು ಮೈದಾನದಲ್ಲಿ ಎಲ್ಲ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಸಿಗುವ ದೈಹಿಕ ಕ್ಷಮತೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳುವ ಕಾರ್ಯ ಶಿಕ್ಷಕರು ಮಾಡಬೇಕು. ಮ್ಯಾಗಿ, ಫಿಝ್ಝ, ಬರ್ಗರ್ ಬದಲು ಪೌಷ್ಠಿಕವಾದ ಹಣ್ಣು, ತರಕಾರಿ, ಮೊಟ್ಟೆ, ಹಾಲಿನಂಥ ಆಹಾರ ಬಳಸಬೇಕು ಎಂದು ಮಂಗಳೂರು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಪ್ರವೀಣಾ ರೈ ಕಿವಿಮಾತು ಹೇಳಿದರು.

ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ಅಧೀನದ ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಮಂಗಳವಾರ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ಉಪಾಧ್ಯಕ್ಷ ಯು.ಎಚ್.ಫಾರೂಕ್ ಅಧ್ಯಕ್ಷತೆ ವಹಿಸಿದ್ದರು. ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಸಯ್ಯದ್ ಮದನಿ ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಅಲೇಕಳ ಮದನಿ ಎಜುಕೇಶನಲ್ ಅಸೋಸಿಯೇಷನ್ ಉಪಾಧ್ಯಕ್ಷ ಮೊಹಮ್ಮದ್ ತ್ವಾಹಾ, ಉದ್ಯಮಿ ಮುನೀರ್ ಬಾವ, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ವಿನಯ ಕುಮಾರ್, ಇಬ್ರಾಹಿಂ ತುಂಬೆ, ಮಸ್ಜಿದುಲ್ ಕರೀಂ ಉಪಾಧ್ಯಕ್ಷ ಜೈನುದ್ದೀನ್ ಇಬ್ರಾಹಿಂ, ಸಿಆರ್‌ಪಿಗಳಾದ ಹರೀಶ್ ಕುಮಾರ್, ಕುಮುದಿನಿ, ಮೋಹನ್ ಕುಮಾರ್, ಸಂಸ್ಥೆ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಪ್ರಸ್ತಾವಿಸಿದರು. ಉಳ್ಳಾಲ ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ ಇದ್ದರು. ಸಪ್ನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net