ಅಧಿವಕ್ತಾ ಪರಿಷತ್‌ನಿಂದ ಮಹಿಳಾ ದಿನಾಚರಣೆ

New Project (26)
Published on

ಮೂಡುಬಿದಿರೆ: ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಮೂಡುಬಿದಿರೆ ಘಟಕ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಶ್ಯಾಮಿಲಿ ಎನ್‌ಕ್ಲೇವ್ ಸಭಾಂಗಣದಲ್ಲಿ ನಡೆಯಿತು.

ಎಂ.ಸಿ.ಎಸ್ ಬ್ಯಾಂಕ್ ಅಧ್ಯಕ್ಷ, ವಕೀಲ ಎಂ.ಬಾಹುಬಲಿ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ, ಅಧಿವಕ್ತಾ ಪರಿಷತ್ತಿನ ಉದ್ದೇಶ ಮತ್ತು ಚಟುವಟಿಕೆಯ ಹಾಗೂ ವಕೀಲರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಘಟಕ ಅಧ್ಯಕ್ಷ ಎಂ.ಕೆ ದಿವಿಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದರು. ಜಿ.ವಿ.ಪೈ ಆಸ್ಪತ್ರೆಯ ಹಿರಿಯ ಸ್ಟಾಫ್ ನರ್ಸ್ ಗುಲಾಬಿ, ಸರ್ಕಾರಿ ಆಸ್ಪತ್ರೆಯ ನಿವೃತ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಗಿರಿಜಾ ಮತ್ತು ಆಳ್ವಾಸ್ ಆಸ್ಪತ್ರೆಯ ಹಿರಿಯ ಸ್ಟಾಫ್ ನರ್ಸ್ ಸುಮತಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಕೀಲರಾದ ಎಂ.ಎಸ್.ಕೋಟ್ಯಾನ್, ಕೆ.ಆರ್.ಪಂಡಿತ್, ಶಾಂತಿಪ್ರಸಾದ್ ಹೆಗ್ಡೆ, ಶ್ವೇತಾ ಜೈನ್, ಸುಮಿತ್ರ, ಸರಿತಾ ಶೆಟ್ಟಿ, ಸಂಜನಾ, ಆನಂದ ಕೆ.ಎಸ್, ಜಗನ್ನಾಥ ಮತ್ತಿತರರಿದ್ದರು. ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net