

ನವದೆಹಲಿ: ಯುನೈಟೆಡ್ ಕಿಂಗ್ಡಮ್ನ ಖ್ಯಾತ ಫ್ಯೂಚರಾಲಜಿಸ್ಟ್ ( ಭವಿಷ್ಯಶಾಸ್ತ್ರಜ್ಞ ) ಡಾ.ಇಯಾನ್ ಪಿಯರ್ಸನ್ ( Ian Pearson ) ಅವರು ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ನೀಡಿರುವ ಮಾಹಿತಿಯೊಂದು ಪ್ರಸ್ತುತ ಯುವ ಪೀಳಿಗೆಯಲ್ಲಿ ಬಹಳ ಆಶ್ಚರ್ಯವನ್ನು ಉಂಟುಮಾಡಿದೆ.
ಇಯಾನ್ ಪಿಯರ್ಸನ್ ಅವರ ಪ್ರಕಾರ ಭವಿಷ್ಯದಲ್ಲಿ ಪುರುಷರಿಗಿಂತ ಮಹಿಳೆಯರೇ ರೋಬೋಟ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಲಿದ್ದಾರಂತೆ. 2025ರ ಆರಂಭದ ವೇಳೆಗೆ ರೋಬೋಟ್‌ಗಳನ್ನು ಲೈಂಗಿಕ ಸಂಗಾತಿಯಾಗಿ ಹೊಂದುವ ಅಭ್ಯಾಸವು ವಿಶೇಷವಾಗಿ ಶ್ರೀಮಂತರಲ್ಲಿ ಹೆಚ್ಚಾಗುತ್ತದೆ ಎಂದು ಪಿಯರ್ಸನ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಪಿಯರ್ಸನ್ ಪ್ರಕಾರ, ಬದಲಾಗುತ್ತಿರುವ ವೈವಾಹಿಕ ಸಂಬಂಧಗಳ ಕಾರಣದಿಂದಾಗಿ ಪುರುಷರಿಗಿಂತ ಮಹಿಳೆಯರೇ ರೋಬೋಟ್‌ಗಳ ಜೊತೆಯಲ್ಲಿ ಹೆಚ್ಚು ಇರುತ್ತಾರೆ. ಪ್ರಸ್ತುತ ಯುಗದಲ್ಲಿ ಮಹಿಳೆಯರ ಲೈಂಗಿಕ ಆಟಿಕೆಗಳು ಮತ್ತು ಸೆಕ್ಸ್ ಟಾಯ್ಗಳ ಬಳಕೆಯು ಕೂಡ ಹೆಚ್ಚಾಗಿದೆ. ಲೈಂಗಿಕ ಉದ್ಯಮವು ಬೆಳೆದಂತೆ ಕೃತಕ ಬುದ್ಧಿಮತ್ತೆ ಮತ್ತು ರೋಬೊಟಿಕ್ಸ್ ಟೆಕ್ನಾಲಜಿ ಕೂಡ ಬೆಳೆಯುತ್ತದೆ. ಇದರಿಂದ ಮುಂದೆ ರೋಬೋಟ್‌ಗಳ ಪ್ರಭಾವ ಹೆಚ್ಚಾಗಲಿದೆ. ಆದರೆ, ತಕ್ಷಣಕ್ಕೆ ಈ ಪರಿಸ್ಥಿತಿ ಬರುತ್ತದೆ ಎಂದು ಹೇಳಲಾಗದು. ಆದರೆ, ಸೆಕ್ಸ್ ಟಾಯ್‌ಗಳು ಮತ್ತು ವೈಬ್ರೇಟರ್‌ಗಳಂತೆಯೇ ರೋಬೋಟ್‌ಗಳ ಬಳಕೆ ಭವಿಷ್ಯದಲ್ಲಿ ಸಾಮಾನ್ಯವಾಗಲಿದೆ. ಮಹಿಳೆಯರು ತಮ್ಮ ಲೈಂಗಿಕ ಸುಖಕ್ಕಾಗಿ ಗಂಡಸರ ಬದಲು ರೋಬೋಟ್‌ಗಳನ್ನು ಬಳಸುವ ಕಾಲ ದೂರವಿಲ್ಲ ಎನ್ನುತ್ತಾರೆ ಇಯಾನ್ ಪಿಯರ್ಸನ್.
2050ರ ಹೊತ್ತಿಗೆ ಮಾನವ ಸಂಬಂಧಗಳಿಗಿಂತ ರೋಬೋಟ್ ಸೆಕ್ಸ್ ಖಂಡಿತವಾಗಿಯೂ ಹೆಚ್ಚು ಜನಪ್ರಿಯವಾಗಲಿದೆ ಎಂದು ಪಿಯರ್ಸನ್ ಭವಿಷ್ಯ ನುಡಿದಿದ್ದಾರೆ. ಆರಂಭದಲ್ಲಿ ಅನೇಕ ಜನರು ರೋಬೋಟ್‌ಗಳೊಂದಿಗೆ ಲೈಂಗಿಕತೆಯನ್ನು ಹೊಂದಲು ಬಯಸುವುದಿಲ್ಲ. ಆದರೆ, ಕಾಲಾನಂತರದಲ್ಲಿ ಜನರು ಅದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
2030ರ ಹೊತ್ತಿಗೆ ವರ್ಚುವಲ್ ರಿಯಾಲಿಟಿ ಸೆಕ್ಸ್ ಸಾಮಾನ್ಯವಾಗಿರುತ್ತದೆ. ಸೆಕ್ಸ್ ರೋಬೋಟ್‌ಗಳು ಭಾವನಾತ್ಮಕ ಅಡೆತಡೆಗಳನ್ನು ತಪ್ಪಿಸುತ್ತವೆ ಮತ್ತು ತಪ್ಪಿತಸ್ಥ ಭಾವನೆಯನ್ನು ಸಹ ತೆಗೆದುಹಾಕುತ್ತವೆ. ಆದ್ದರಿಂದ, ಜನರು ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಬಹುದು ಎಂದು ಇಯಾನ್ ಪಿಯರ್ಸನ್ ಹೇಳಿರುವುದಾಗಿ ಬ್ರಿಟಿಷ್ ಡೈಲಿ 'ದಿ ಸನ್' ವದರಿ ಮಾಡಿದೆ. (ಏಜೆನ್ಸೀಸ್)