ತನ್ನ ಮನೆಗೆ ತಾನೇ ಬೆಂಕಿ ಹಚ್ಚಿ ಅರಾಮಾಗಿ ಕುಳಿತು ನೋಡಿದ ಮಹಿಳೆ! ವಿಚಿತ್ರ ವರ್ತನೆಯ ವಿಡಿಯೋ ವೈರಲ್

fire
Published on

ವಾಷಿಂಗ್ಟನ್: ವಿಚಿತ್ರ ಜನರನ್ನು ನೋಡಿರುತ್ತೀರಿ. ಆದರೆ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿ, ಅದು ಹೊತ್ತಿ ಉರಿಯುವುದನ್ನು ನೋಡುತ್ತಾ ಕೂರುವ ಜನರನ್ನು ನೋಡಿದ್ದೀರಾ?

ಹೌದು! ಇಂತದ್ದೊಂದು ಘಟನೆ ನಿಜಕ್ಕೂ ನಡೆದಿದೆ. ಅಮೆರಿಕದ ಮೇರಿಲ್ಯಾಂಡ್​ನಲ್ಲಿ ಈ ರೀತಿಯ ಘಟನೆ ನಡೆದಿದೆ. ಗೆಯ್ಲೆ ಮೆಟ್ವಾಲಿ ಹೆಸರಿನ ಮಹಿಳೆ ಈ ರೀತಿ ಮಾಡಿದ್ದಾಳೆ. ಇತ್ತೀಚೆಗೆ ಒಂದು ದಿನ ತನ್ನ ಮನೆಗೆ ಬೆಂಕಿ ಹಚ್ಚಿ, ಎದುರಿನ ಗಾರ್ಡನ್​ನಲ್ಲಿ ಒಂದು ಕುರ್ಚಿ ಹಾಕಿಕೊಂಡು ಕುಳಿತು, ಮನೆ ಉರಿಯುತ್ತಿರುವುದನ್ನು ನೋಡಿದ್ದಾಳೆ. ಅಲ್ಲೇ ಪುಸ್ತಕವನ್ನೂ ಓದಿದ್ದಾಳೆ.

ಈ ಘಟನೆಗೂ ಮೊದಲು ಆ ಮನೆಯಲ್ಲಿ ಯಾರೋ ಕೂಗಿಕೊಂಡ ಸದ್ದು ಕೇಳಿತ್ತಂತೆ. ಮಹಿಳೆಯ ವಿಚಿತ್ರ ವರ್ತನೆಯನ್ನು ನೆರೆ ಮನೆಯವರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸ್ಥಳೀಯರೊಬ್ಬರು ಮನೆ ಬಳಿ ಹೋಗಿದ್ದು, ಅಲ್ಲಿ ವಯಸ್ಕ ವ್ಯಕ್ತಿಯೊಬ್ಬ ಚೀರಿಕೊಳ್ಳುತ್ತಿದ್ದುದ್ದನ್ನು ನೋಡಿ, ಆತನನ್ನು ಕಿಟಕಿಯಿಂದ ಹೊರಗೆಳೆದು ಬೆಂಕಿಯಿಂದ ರಕ್ಷಿಸಿದ್ದಾನೆ ಎನ್ನಲಾಗಿದೆ. ಸದ್ಯ ಆ ಮಹಿಳೆಯನ್ನು ಮೇರಿಲ್ಯಾಂಡ್​ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆ ಈ ರೀತಿ ಮಾಡುವುದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದುಬಂದಿಲ್ಲ. ಸದ್ಯ ಮಹಿಳೆಯ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net