ಮಹಿಳಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ

20KKNR-05
ಕುಕನೂರು ಪಟ್ಟಣದ ಮುಂಡರಗಿ ಅನ್ನದಾನೇಶ್ವರ ಶಾಖಾಮಠದಲ್ಲಿ ಶ್ರೀಗಳ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಪ್ರಥಮ ಶರಣ ಸಂಸ್ಕೃತಿ ಉತ್ಸವ-2024ರ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಾಧಿಕಾರಿ ಸತೀಶ ಗಾಂವಕರ ಶನಿವಾರ ಉದ್ಘಾಟಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ಣ ಕಾಳಿ, ಪ್ರಮುಖರಾದ ಗದಿಗೆಪ್ಪ ಪವಾಡಶೆಟ್ಟಿ, ವೀರಯ್ಯ ತೋಂಟದಾರ್ಯಮಠ, ಹನುಮಂತಪ್ಪ ಹಂಪನಾಳ, ಪ್ರಭು ಶಿವಸಿಂಪರ, ಈರಪ್ಪ ಮ್ಯಾಳಿ, ನಿರ್ಮಲ ಕಳ್ಳಿಮಠ ಇದ್ದರು.
Published on

ಕುಕನೂರು: ಜಾತಿ ತಾರತಮ್ಯ ಮಾಡದೇ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿದಗಲೇ ಮನುಷ್ಯತ್ವ ಉಳಿಯಲು ಸಾಧ್ಯ ಎಂದು ಯಲಬುರ್ಗಾ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಾಧಿಕಾರಿ ಸತೀಶ ಗಾಂವಕರ ಹೇಳಿದರು.

ಪಟ್ಟಣದ ಮುಂಡರಗಿ ಅನ್ನದಾನೇಶ್ವರ ಶಾಖಾಮಠದಲ್ಲಿ ಶ್ರೀಗಳ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಪ್ರಥಮ ಶರಣ ಸಂಸ್ಕೃತಿ ಉತ್ಸವ-2024ರ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಶ್ರೀಗಳು ಮಹಿಳಾ ಸಮಾವೇಶ ಮೂಲಕ ಮಹಿಳಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಶರಣ ಸಂಸ್ಕೃತಿಯನ್ನು ಎಲ್ಲರಲ್ಲೂ ಮೂಡುಸುತ್ತಿದ್ದಾರೆ. ಜಾತಿ, ಮತ ಮತ್ತು ಪಂಥವೆನ್ನದೆ ಸರ್ವರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವುದನ್ನ ಕಂಡಾಗ ಸಂತೋಷವೆನಿಸುತ್ತದೆ ಎಂದರು.

ಪ್ರಮುಖರಾದ ಕರಬಸಯ್ಯ ಬಿನ್ನಾಳ ಮಾತನಾಡಿ, ನನ್ನಂತಹ ಸಾಮಾನ್ಯರನ್ನ ದೊಡ್ಡ ಕಾರ್ಯಕ್ರಮಕ್ಕೆ ಅಧ್ಯಕ್ಷರನ್ನಾಗಿ ಮಾಡಿ, ನಾವು ಶರಣರ ಬಗ್ಗೆ ಚಿಂತನೆ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟ ಪೂಜ್ಯರ ಕಾರ್ಯ ಶ್ಲಾಘನೀಯ. ಬಸವಾದಿ ಶರಣರ ಸಂದೇಶಗಳನ್ನು ಅಳವಡಿಸಿಕೊಂಡು, ಪರಂಪರೆಯನ್ನು ಬೆಳೆಸುವ ಕಾರ್ಯ ನಡೆಯಬೇಕು. ನಮ್ಮೂರಿನ ಮಠ ಎಂಬ ಸ್ವಾಭಿಮಾನ ನಮ್ಮಲ್ಲಿ ಬಂದಾಗ ಮಠ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಉತ್ಸವ ಸಮಿತಿ ಸಂಚಾಲಕ ರಾಮನಗೌಡ ಹುಚನೂರ, ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ಣ ಕಾಳಿ, ಪ್ರಮುಖರಾದ ಗದಿಗೆಪ್ಪ ಪವಾಡಶೆಟ್ಟಿ, ವೀರಯ್ಯ ತೋಂಟದಾರ್ಯಮಠ, ಹನುಮಂತಪ್ಪ ಹಂಪನಾಳ, ಪ್ರಭು ಶಿವಸಿಂಪರ, ಈರಪ್ಪ ಮ್ಯಾಳಿ, ನಿರ್ಮಲ ಕಳ್ಳಿಮಠ, ಶಿವವಾಯಿ ಯಕ್ಲಾಸಪೂರ, ಜಂಭಣ್ಣ ರುದ್ರಾಕ್ಷಿ, ಶಿವಲಿಂಗಯ್ಯ ಶಿರೂರಮಠ, ಪ್ರಕಾಶ ಬಂಡಿ, ಮಲ್ಲಯ್ಯ ರ‌್ಯಾವಣಿಕಿ, ಮಲ್ಲಪ್ಪ ಬೆಣಕಲ್, ನಿಂಗಪ್ಪ ಗೋರ್ಲೆಕೊಪ್ಪ ಇತರರಿದ್ದರು.

12ನೇ ಶತಮಾನದಲ್ಲಿ ಗುರು ಬಸವಣ್ಣನವರು ಜಾತಿ, ವರ್ಣ, ವರ್ಗ ಮತ್ತು ಲಿಂಗ ಭೇದವನ್ನ ಅಳಿಸಿ ಸರ್ವ ಸಮಾನತೆಗಾಗಿ ಹೋರಾಡಿದ್ದಾರೆ. ಆದರೆ, ಇಂದಿನ ಕಾಲದಲ್ಲಿ ಶರಣರನ್ನು ಜಾತಿಗೆ ಸೀಮಿತ ಮಾಡುತ್ತೀರುವುದು ನೋವಿನ ಸಂಗತಿ. ಬಸವಣ್ಣ ಎಲ್ಲ ಶರಣರನ್ನು ಒಗ್ಗೂಡಿಸಿಕೊಂಡು ಬದುಕು ನಡೆಸಿದರು. ಅಂತಹ ಬಸವಣ್ಣನವರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಕ್ಕೆ ಅಭಿನಂದನೆಗಳುಡಾ.ಮಹಾದೇವ ಸ್ವಾಮೀಜಿ, ಅನ್ನದಾನೇಶ್ವರ ಶಾಖಾಮಠ ಕುಕನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net