More

    ಬಾರ್ ವಿರುದ್ಧ ಬಾರ್‌ಕೋಲ್ ಹಿಡಿದ ಮಹಿಳಾಮಣಿಗಳು

    ಸೊರಬ: ಬಾರ್ ಮತ್ತು ರೆಸ್ಟೋರಂಟ್ ತೆರವಿಗೆ ಆಗ್ರಹಿಸಿ ತಾಲೂಕಿನ ಮಾವಲಿ ಗ್ರಾಮದಲ್ಲಿ ಮಹಿಳೆಯರು ರಸ್ತೆತಡೆ ನಡೆಸಿದರು.

    ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಂಜುಳಾ ಮಾತನಾಡಿ, ಮಾವಲಿ ಮತ್ತು ಯಲವಳ್ಳಿ ಮಾರ್ಗದಲ್ಲಿ ಇತ್ತೀಚೆಗೆ ಬಾರ್ ಮತ್ತು ರೆಸ್ಟೋರೆಂಟ್ ಆರಂಭವಾಗಿದೆ. ಈ ಮಾರ್ಗದಲ್ಲಿ ಹತ್ತಾರು ಹಳ್ಳಿಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ರಾತ್ರಿ-ಹಗಲು ಎನ್ನದೆ ಓಡಾಡುತ್ತಾರೆ. ಇದೀಗ ಬಾರ್ ಆರಂಭವಾದ ಬಳಿಕ ಕುಡಕರ ಸಂಖ್ಯೆ ಹೆಚ್ಚಾಗಿದ್ದು ಈ ಮಾರ್ಗದಲ್ಲಿ ಓಡಾಡಲು ಭಯ ಆಗುತ್ತಿದೆ. ಅಲ್ಲದೆ ಗ್ರಾಮಸ್ಥರ ನೆಮ್ಮದಿ ಸಹ ಇದರಿಂದ ಕೆಡುವುವಂತಾಗಿದೆ. ತಕ್ಷಣ ಈ ಬಾರ್ ಮತ್ತು ರೆಸ್ಟೋರೆಂಟ್‌ನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
    ಸ್ಥಳಕ್ಕಾಗಮಿಸಿದ ಪಿಎಸ್‌ಐ ನಾಗರಾಜ್ ಪ್ರತಿಭಟನಾನಿರತರ ಮನವೊಲಿಕೆಗೆ ಯತ್ನಿಸಿದರು. ಅಬಕಾರಿ ನಿರೀಕ್ಷಕ ಶ್ರೀನಾಥ ಮಾತನಾಡಿ, ಜನವಸತಿ ಇಲ್ಲದ ಸ್ಥಳದಲ್ಲಿ ಗ್ರಾಪಂ ಹಾಗೂ ಅಬಕಾರಿ ಕಾಯ್ದೆಯಿಡಿ ಪರಿಶೀಲಿಸಿ ಅನುಮತಿ ನೀಡಲಾಗಿದೆ. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸುವಂತೆ ಬಾರ್ ಮಾಲಿಕರಿಗೆ ಸೂಚಿಸಲಾಗುವುದು ಎಂದರು.
    ಆದಾಗ್ಯೂ ಸಮಾಧಾನಗೊಳ್ಳದ ಗ್ರಾಮಸ್ಥರು ಬಾರ್ ಮತ್ತು ರೆಸ್ಟೋರೆಂಟ್ ಸ್ಥಳಾಂತರಗೊಳ್ಳುವವರೆಗೆ ಮತ್ತೆ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಶಾಂತಮ್ಮ, ನೀಲಮ್ಮ, ರೇಣುಕಮ್ಮ ಮಲ್ಲಿಕಾರ್ಜುನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts