

ವಿಜಯಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಹಲವು ಅವಾಂತರಗಳನ್ನು ಸೃಷ್ಠಿಸುತ್ತಿದ್ದು, ಸಾರ್ವಜನಿಕ ಶೌಚಾಲಯ ಕುಸಿದು ಮೂವರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ.
ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಬೆಳಗ್ಗೆ ಶೌಚಕ್ಕೆ ತೆರಳಿದ ಸಂದರ್ಭ ಏಕಾಏಕಿ ಗೋಡೆ ಕುಸಿದಿದೆ.
ಮೇಲ್ಛಾವಣಿ ಕುಸಿದು ಬಿದ್ದ ಸಂದರ್ಭದಲ್ಲಿ ಶೌಚಾಲಯದಲ್ಲಿ ಮೂವರು ಮಹಿಳೆಯರು ಸಿಲುಕಿಕೊಂಡಿದ್ದರು. ತಕ್ಷಣವೇ ಅವರನ್ನು ಗ್ರಾಮಸ್ಥರು ಹೊರ ತೆಗೆದಿದ್ದಾರೆ. ಕಮಲಾಬಾಯಿ ಬಗಲಿ, ಮುಸ್ಕಾನ್ ಕೊಲ್ಹಾರ, ಮುರ್ತುಜಭೀ ಭಾಂಗಿ ಎಂಬ ಮೂವರಿಗೆ ಗಾಯಗಳಾಗಿವೆ. ಈ ಸಂದರ್ಭ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.