More

    ಭಜರಂಗದಳ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ? ಡಿಸಿಪಿ ಎದುರು ಹಾಜರಾಗಲು ಸೂಚನೆ

    ಮಂಗಳೂರು: ಮಂಗಳೂರಿನ ಮೂವರು ಭಜರಂಗದಳ ಕಾರ್ಯಕರ್ತರಿಗೆ “ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು?” ಎಂದು ಕೇಳಿ ನೋಟೀಸ್ ನೀಡಲಾಗಿದೆ.

    ಇಂದು ಆ ಮೂವರು ಬಜರಂಗದಳ ಕಾರ್ಯಕರ್ತರಿಗೆ ಕಾ‌ನೂನು ಸುವ್ಯವಸ್ಥೆ ಖಾತ್ರಿ ಪಡಿಸಲು ಡಿಸಿಪಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ಈ ಸಂದರ್ಭ ಅಧಿಕೃತವಾಗಿ ಒಂದು ವರ್ಷದ ಕಾಲ ಗಡೀಪಾರು ಮಾಡಿ ಆದೇಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಭಜರಂಗದಳ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ? ಡಿಸಿಪಿ ಎದುರು ಹಾಜರಾಗಲು ಸೂಚನೆ ಭಜರಂಗದಳ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ? ಡಿಸಿಪಿ ಎದುರು ಹಾಜರಾಗಲು ಸೂಚನೆ

    ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಆಗಬಹುದಾದ ಮೂವರು ಹಿಂದೂ ಕಾರ್ಯಕರ್ತರು ಇತ್ತೀಚೆಗೆ ನಡೆದ ಎರಡು ನೈತಿಕ ಪೊಲೀಸ್ ಗಿರಿ ಕೇಸ್ ನಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇವರು ಸುಲ್ತಾನ್ ಜ್ಯುವೆಲ್ಲರಿನಲ್ಲಿ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ಭಜರಂಗದಳ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ? ಡಿಸಿಪಿ ಎದುರು ಹಾಜರಾಗಲು ಸೂಚನೆ
    ಜಯ ಪ್ರಶಾಂತ
    ಭಜರಂಗದಳ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ? ಡಿಸಿಪಿ ಎದುರು ಹಾಜರಾಗಲು ಸೂಚನೆ
    ಗಣೇಶ ಅತ್ತಾವರ

     

    ಹೀಗಾಗಿ ಸ್ಥಳೀಯ ಠಾಣೆಗಳ ಇನ್ಸ್‌ಪೆಕ್ಟರ್​ಗಳಿಂದ ಗಡಿಪಾರಿಗೆ ವರದಿಯನ್ನು ಕೇಳಲಾಗಿದೆ. ಹೀಗಾಗಿ ಅಧಿಕೃತವಾಗಿ ಕಾನೂನು ಪ್ರಕಾರ ಗಡೀಪಾರು ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಇದೀಗ ನೋಟೀಸ್ ನೀಡಿ ಗಡೀಪಾರು ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇಂದು ಆ ಮೂವರು ಡಿಸಿಪಿ ಎದುರು ಅವರು ಹಾಜರಾಗಿದ್ದು, ಇಂದು ಭವಿಷ್ಯ ನಿರ್ಣಯ ಆಗಲಿದೆ.

    LIVE | ರಾಜ್ಯ ವಿಧಾನಮಂಡಲ ಅಧಿವೇಶನ ನೇರಪ್ರಸಾರ- 21/07/2023

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts