blank

ಇನ್ನೇನು ಕೆಲವೇ ದಿನಗಳಲ್ಲಿ ಮದುವೆ… ನೂರಾರು ಕನಸು ಕಂಡಿದ್ದ ವಧು ಸಾವಿಗೆ ಕಾರಣವಾಯ್ತು ಅದೊಂದು ವ್ಯಥೆ! | Suicide

blank

Bride Suicide: ಪ್ರತಿಯೊಬ್ಬರ ಜೀವನದಲ್ಲಿ ದಾಂಪತ್ಯ ಜೀವನ ಎಂಬುದು ಇರಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಮದುವೆ ಅನ್ನೋ ಪದ ಕೇಳಿದಾಕ್ಷಣ ಅನೇಕರು, ತಮ್ಮ ಹುಡುಗಿ-ಹುಡುಗ ಹೀಗಿರಬೇಕು, ಹಾಗಿರಬೇಕು ಎಂಬ ಹತ್ತಾರು ಆಸೆಗಳನ್ನು ಹೊಂದಿರುತ್ತಾರೆ. ಅದರಲ್ಲೂ ಎಲ್ಲರ ಬಾಳಿನಲ್ಲೂ ಮದುವೆ ಎಂಬುದು ಎರಡನೇ ಹೊಸ ಜೀವನ. ದಾಂಪತ್ಯ ಜೀವನಕ್ಕೆ ಕಾಲಿಡುವ ವರನಿಗಿಂತ, ವಧುವಿಗೆ ಅಪಾರ ಕನಸು ಮತ್ತು ತ್ಯಾಗಗಳಿರುತ್ತವೆ. ತಾನು ಬೆಳೆದು, ಬಾಳಿದ ಮನೆ, ಹೆತ್ತವರನ್ನು ಬಿಟ್ಟು ಹೊಸ್ತಿಲು ದಾಟುವ ಹೆಣ್ಣುಮಗಳ ಕಣ್ಣೀರು, ಬಿಸಿ ಉಸಿರು ಹಲವು ನೋವುಗಳನ್ನು ಹೇಳುತ್ತಿರುತ್ತದೆ. ಇಂತಹ ಮನಸ್ಸಿಗೆ ಹಿಂಸೆ, ಘಾಸಿಯನ್ನುಂಟು ಮಾಡುವ ಘಟನೆಯಿಂದ ಸಾವಿಗೀಡಾಗುವ ಮುಖೇನ ತಮ್ಮೆಲ್ಲಾ ಕನಸು, ಆಸೆಗಳನ್ನು ಅರ್ಧಕ್ಕೆ ಮೊಟುಕುಗೊಳಿಸುವುದು ನಿಜಕ್ಕೂ ದುಃಖಕರ ಸಂಗತಿ. ಸದ್ಯ ಇಲ್ಲೊಂದು ಘಟನೆ ಕೂಡ ಅದೇ ಸಾಲಿಗೆ (Suicide) ಸೇರಿದೆ.

ಇದನ್ನೂ ಓದಿ: ಲಾಟರಿ ಹಾವಳಿ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ತಮ್ಮ ಮನೆಯ ಹೆಣ್ಣುಮಗಳನ್ನು ಮತ್ತೊಂದು ಮನೆಗೆ ಕಳಿಸುವಾಗ ಹೆತ್ತವರಿಗೆ ಆತಂಕ, ನೋವು ಕಾಡುತ್ತಿರುತ್ತದೆ. ಇದೆಲ್ಲವೂ ಮುಂಚಿತವಾಗಿಯೇ ತಿಳಿದಿದ್ದರೂ ಸಹ ಆಕೆಯ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಲು ಪೋಷಕರು ಯೋಚಿಸುವ ದಾಟಿ, ಮಾಡುವ ತ್ಯಾಗಗಳು ಅಪಾರ. ಗಂಡನ ಮನೆಗೆ ಕಳಿಸುವ ಹೆತ್ತವರು, ಮಗಳ ಭವಿಷ್ಯಕ್ಕಾಗಿ ಆಕೆ ಹುಟ್ಟಿದಾಗಿನಿಂದಲೂ ಒಂದಲ್ಲ ಒಂದು ತ್ಯಾಗಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಇನ್ನು ಅವಳು ಮದುವೆಗೆ ಬಂದ ಸಮಯದಲ್ಲಿ ಅವಳನ್ನು ಮನೆಯಿಂದ ಕಳಿಸಿಕೊಡುವ ತ್ಯಾಗವನ್ನು ಒಲ್ಲದ ಮನಸ್ಸಿನಿಂದ ನಿರ್ವಹಿಸುತ್ತಾರೆ. ಈ ಮಧ್ಯೆ ಆಕೆಯನ್ನು ಖುಷಿ ಖುಷಿಯಿಂದ ಕಳಿಸಿಕೊಡಬೇಕು ಎಂಬ ಬಯಕೆ ಪೋಷಕರದ್ದು. ಇದಕ್ಕಾಗಿ ಅವರು ಇಡುವ ಮೊದಲ ಹೆಜ್ಜೆಯೇ ಸಾಲದ ಸುಳಿಗೆ.

ಕನಸು ಕಟ್ಟಿದ್ದ ವೇಣು

ಇತ್ತೀಚೆಗಷ್ಟೇ ಎರಡನೇ ಮಗಳ ಎಂಗೇಜ್​ಮೆಂಟ್​ ಅನ್ನು ಅಚ್ಚುಕಟ್ಟಾಗಿ ಮಾಡಿ ಮುಗ್ಗಿಸಿದ್ದ ಪೋಷಕರು, ಮದುವೆಯನ್ನು ಮಾತ್ರ ಅದ್ಧೂರಿಯಾಗಿ ಮಾಡಬೇಕೆಂದು ನಿರ್ಧರಿಸಿದ್ದರು. ವೇಣು ಎಂಬ ವ್ಯಕ್ತಿ, ಸಣ್ಣ ಗಿರವಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಈ ವೇಳೆ ಮೊದಲ ಪುತ್ರಿ ಮದುವೆಯಾಗಿ, ನಾಲ್ಕು ವರ್ಷಗಳು ಕಳೆದಿತ್ತು. ಈ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾದ ಆಕೆ, ಆರೋಗ್ಯ ಸಮಸ್ಯೆಯನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾದಳು. ಇನ್ನು ಎರಡನೇ ಮಗಳ ವಿವಾಹದ ಬಗ್ಗೆ ಸಾಕಷ್ಟು ಕನಸು ಕಟ್ಟಿದ್ದ ವೇಣು, 3 ಲಕ್ಷ ರೂ. ಎರವಲು ತೆಗೆದುಕೊಂಡಿದ್ದರು.

ಅವಾಚ್ಯ ಪದಗಳಿಂದ ನಿಂದನೆ

ಇನ್ನೇನು ಮಗಳ ಮದುವೆಗೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ ಎನ್ನುವಷ್ಟರಲ್ಲಿ ಸಾಲಗಾರರು ಹಣ ಕೊಡುವಂತೆ ಒತ್ತಾಯ ಹೇರಿದ್ದರು. ಪುತ್ರಿಗೆ ಮದುವೆ ಫಿಕ್ಸ್ ಆಗಿದೆ, ಆದಷ್ಟು ಬೇಗ ತೀರಿಸುವೆ, ಕೊಂಚ ದಿವಸ ಕಾಲಾವಕಾಶ ಕೊಡಿ ಎಂದು ಅಂಗಲಾಚಿ ಬೇಡಿಕೊಂಡರೂ ಕರಗದ ಅಸಾಮಿಗಳು, ಅವಾಚ್ಯ ಪದಗಳಿಂದ ನಿಂದಿಸಿ, ವಿಪರೀತ ಕಿರುಕುಳ ಕೊಟ್ಟಿದ್ದಾರೆ. ಈ ನೋವನ್ನು ತಾಳಲಾರದ ವೇಣು, ತಮ್ಮ ಪತ್ನಿ ಅನುರಾಧ ಮತ್ತು ವಿವಾಹ ನಿಶ್ಚಯವಾಗಿದ್ದ ಮಗಳನ್ನು ಕರೆದುಕೊಂಡು ಗೋದಾವರಿ ನದಿಗೆ ಹಾರಿದ್ದಾರೆ.

ಪ್ರಾಣಪಾಯದಿಂದ ಪಾರು

ಗೋದಾವರಿ ನದಿಗೆ ಜಿಗಿದ ಯಾದಾದ್ರಿ ಭುವನಗಿರಿ ಜಿಲ್ಲೆಯ ಮೋತ್ಕೂರಿನ ಉಪ್ಪಲಿಂಚಿ ವೇಣು (54) ಮತ್ತು ಅವರ ಪುತ್ರಿ ಸಾವನ್ನಪ್ಪಿದರೆ, ಪತ್ನಿ ಅನುರಾಧರನ್ನು ಗಂಗಾಪುತ್ರ ಸ್ಥಳೀಯರು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. ಈ ದಾರುಣ ಘಟನೆ ನಿರ್ಮಲ್ ಜಿಲ್ಲೆಯ ಬಸರಾದಲ್ಲಿ ಸಂಭವಿಸಿದೆ. ಅನುರಾಧರನ್ನು ಬದುಕುಳಿಸಿದ ಸ್ಥಳೀಯರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಖಾಕಿ ಪಡೆ, ಮೃತದೇಹಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).

ಮೊಬೈಲ್​ನಲ್ಲಿ ಬ್ಯಾಟರಿ​ ಬೇಗ ಖಾಲಿಯಾಗ್ತಿದ್ಯಾ? ಹಾಗಿದ್ರೆ ಈಗಲೇ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ! | Battery Drain

Share This Article

ಬೆಳಗ್ಗೆ ಹೊತ್ತು ವಾಲ್​ನಟ್ಸ್​​ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ | Walnuts

ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಇಂದು ಅನೇಕರು ಹೊಸ ಹೊಸ ರೀತಿಯ ಕಸರತ್ತನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಲವರು…

ಆಯುಷ್ಯ ಇರುವಾಗ ಸಾಯುವವರೆಗೆ ಬದುಕಲೇಬೇಕಲ್ಲ!

| ಡಾ.ಕೆ.ಪಿ. ಪುತ್ತೂರಾಯ ಇದು ಸಹಿಸಿಕೊಳ್ಳಲಾಗದ ವೃದ್ಯಾಪಕ್ಕೆ ಒಳಗಾಗಿ ಸಾಯಲಾಗದೆ ಸಾವಿನ ಕ್ಷಣವನ್ನೇ ಎದುರು ನೋಡುತ್ತಿರುವ…

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…