ಚಲಿಸುತ್ತಿದ್ದ ಬಸ್​ನ ಕಿಟಕಿಯಿಂದ ತಲೆ ಹೊರಹಾಕಿದ ಮಹಿಳೆ: ಕ್ಷಣ ಮಾತ್ರದಲ್ಲೇ ನಡೆದಿತ್ತು ದುರಂತ..!

bus (1)
ಸಾಂದರ್ಭಿ ಚಿತ್ರ
Published on

ದೆಹಲಿ: ಕಿಟಕಿಯಿಂದ ತಲೆ ಹೊರಹಾಕಿ ವಾಂತಿ ಮಾಡಿಕೊಳ್ಳುತ್ತಿದ್ದ ಮಹಿಳೆಯ ತಲೆ ಎರಡು ವಾಹನಗಳ ನಡುವೆ ತೀವ್ರವಾಗಿ ನಜ್ಜುಗುಜ್ಜಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ದೆಹಲಿ ಬಳಿಯ ಅಲಿಪುರ ಪ್ರದೇಶದಲ್ಲಿ ನಡೆದಿದೆ.

ಬಾಬ್ಲಿ (20) ಎಂಬಾಕೆಯೇ ಮೃತ ದುದೈವಿಯಾಗಿದ್ದು, ಉತ್ತರಪ್ರದೇಶದ ಪ್ರತಾಪಗಢ ನಿವಾಸಿಯಾಗಿದ್ದಾಳೆ. ಮಹಿಳೆಯು ಐಎಸ್‌ಬಿಟಿ ಕಾಶ್ಮೀರಿ ಗೇಟ್‌ನಿಂದ ಹರಿಯಾಣ ರೋಡ್‌ವೇಸ್ ಬಸ್‌ನಲ್ಲಿ ಬಾಬ್ಲಿ ಲೂಧಿಯಾನಕ್ಕೆ ಹೋಗುತ್ತಿದ್ದಳು. ಈ ವೇಳೆ ಆಕೆಯ ಜತೆಗೆ ಸೋದರ ಮಾವ ಸಂತೋಷ್, ಆಕೆಯ ಸಹೋದರಿ ಪೂನಂ ಮತ್ತು ಅವರ 3 ಮಕ್ಕಳು ಇದ್ದರು.

ಈಕೆ ಪ್ರಯಾಣಿಸುತ್ತಿದ್ದ ಬಸ್ ಹರಿಯಾಣದ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ಆಕೆಗೆ ವಾಂತಿ ಬಂದಿರುವ ಅನುಭವವಾಗಿದ್ದು, ಕೂಡಲೇ ಆಕೆ ವಾಂತಿ ಮಾಡಿಕೊಳ್ಳಲು ಆರಂಭಿಸಿದಾಗ ಆಕೆ ಕಿಟಕಿಯಿಂದ ತಲೆ ಹಾಕಿದ್ದಾಳೆ. ಅಷ್ಟರಲ್ಲಿ ಅಪರಿಚಿತ ವಾಹನವೊಂದು ಬಸ್‌ನ ಸಮೀಪವೇ ಬಂದು ಹಾದು ಹೋಗಿದ್ದು, ಕ್ಷಣ ಮಾತ್ರದಲ್ಲಿ ಮಹಿಳೆಯ ತಲೆ ಎರಡು ವಾಹನಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿದೆ.

ಕೂಡಲೇ ಬಸ್ ಚಾಲಕ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಕುರಿತು ಪ್ರಕರಣವನ್ನು ದಾಖಲಿಸಕೊಂಡಿರುವ ಪೊಲೀಸರು ಅಪರಿಚಿತ ವಾಹನಕ್ಕಾಗಿ ತೀವ್ರ ಶೋಧನೆಯನ್ನು ನಡೆಸುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net